ತಾಯ್ನಾಡಿಗೆ ಮರಳುವುದಕ್ಕೆ ಸಿದ್ದರಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಕಾರ್ಗಿಲ್ ಯುದ್ದಕ್ಕೆ ಸಂಬಂಧ ಪಟ್ಟಂತೆ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದ್ರೋಹ ಎಸಗಿದೆ ಎಂದು ಹೇಳಿದ್ದಾರೆ.
ಸ್ವದೇಶಕ್ಕೆ ಮರಳಿದ ನಂತರ ಪುನಃ ಅಧಿಕಾರಕ್ಕೆ ಬಂದಲ್ಲಿ ಕಾರ್ಗಿಲ್ ಘಟನೆಗೆ ಕಾರಣವಾದ ಅಂಶಗಳನ್ನು ತನಿಖಾ ಆಯೋಗ ನೇಮಿಸುವ ಮೂಲಕ ಬಹಿರಂಗಪಡಿಸುವುದಾಗಿ ಅವರು ವಾಗ್ದಾನ ಮಾಡಿದ್ದು. ದುರಂತಕಾರಿ ಕಾರ್ಗಿಲ್ ಯುದ್ದ ಇಂದಿನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರ ಕಾರಣದಿಂದ ಆಗಿದೆ. ಕಾರ್ಗಿಲ್ ಆಕ್ರಮಣದ ಕುರಿತು ನನಗೆ ಮಾಹಿತಿ ಇರಲಿಲ್ಲ ಎಂದು ಹಿಂದೆ ಒಂದೊಮ್ಮೆ ಹೇಳಿದ ವಾಕ್ಯವನ್ನು ಪುನರುಚ್ಚಿಸಿದ್ದಾರೆ.
ಭಾರತ- ಪಾಕ್ ನಡುವೆ ಸಂಬಂಧಗಳಲ್ಲಿನ ಸುಧಾರಣೆ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಬೇಕಿರಲಿಲ್ಲ ಆದ್ದರಿಂದ ಕಾರ್ಗಿಲ್ ಆಕ್ರಮಣಕ್ಕೆ ಮುಂದಾದರು. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮುಷರಫ್ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದುದಕ್ಕೆ ಪಶ್ಚಾತಾಪ ಅನುಭವಿಸುತ್ತಿದ್ದೆನೆ. ಕಾರ್ಗಿಲ್ ಘಟನೆಯ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಷರೀಫ್ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದ್ದು ಸರಿಯಾಗಿದೆ ವಾಜಪೇಯಿ ನೋವು ನನಗೆ ಅರ್ಥವಾಗುತ್ತದೆ ಎಂಬಂತೆ ತಾವು ಎಸಗಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅದ್ಯಾಯದಲ್ಲಿ ಕಾರ್ಗಿಲ್ ಕರಾಳ ರೂಪದಲ್ಲಿ ಉಳಿಯಲಿದೆ. ಈ ಘಟನೆ ನನ್ನ ಜೀವನ ಉದ್ದಕ್ಕೂ ಕಾಡಲಿದೆ ಎಂದು ಹೇಳಿದರು.
|