ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಮಿತಿಯ ವರದಿ ಗಣನೆ: ಸಿಪಿಎಂ ಸಲಹೆ
ಪರಮಾಣು ಒಪ್ಪಂದ ಅನುಷ್ಠಾನಕ್ಕೆ ತರುವ ಯಾವುದೇ ಕ್ರಮ ಕೈಗೊಳ್ಳುವ ಮುಂಚೆ ಸಮಿತಿಯ ವರದಿಯನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕೆಂದು ಎಡಪಕ್ಷಗಳು ಭಾನುವಾರ ತಿಳಿಸಿದೆ.

ಸಿಪಿಎಂ ಪಾಲಿಟ್‌ಬ್ಯುರೋ ಸದಸ್ಯ ಸೀತಾರಾಂ ಯೆಚೂರಿ ಇಲ್ಲಿ ಮಾತನಾಡುತ್ತಾ "ಒಪ್ಪಂದ ಅನುಷ್ಠಾನಕ್ಕೆ ತರುವ ಮುಂದಿನ ಕ್ರಮಗಳಿಗೆ ಸರ್ಕಾರ ಧಾವಿಸುವ ಮುಂಚೆ ಸಮಿತಿಯ ವರದಿಯನ್ನು ಪರಿಗಣಿಸಬೇಕು" ಎಂದು ತಿಳಿಸಿದರು. ಸಮಿತಿಯ ಪ್ರಥಮ ಸಭೆ ಮಂಗಳವಾರ ಆರಂಭವಾಗಲಿದೆ.

ಸರ್ಕಾರದ ಸ್ಥಿರತೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಪರಮಾಣು ಒಪ್ಪಂದ ಮತ್ತು ಹೈಡ್ ಕಾಯ್ದೆಯಿಂದ ರಾಷ್ಟ್ರೀಯ ಸಾರ್ವಬೌಮತೆ ಮತ್ತು ಹಿತಾಸಕ್ತಿ ಮೇಲೆ ಪರಿಣಾಮಗಳು" ನಮ್ಮ ಕಾರ್ಯಸೂಚಿಯಾಗಿದೆ ಎಂದು ಹೇಳಿದರು.

ಈ ಹಂತದಲ್ಲಿ ಸಿಪಿಎಂ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಹೇಳಿದ ಅವರು, ಪರಮಾಣು ಒಪ್ಪಂದ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಕೂಟದ ಉಳಿವಿನ ನಡುವೆ ಯಾವುದೇ ಕೊಂಡಿಯಿಲ್ಲ ಎಂದು ಯೆಚೂರಿ ಇಂಗಿತ ನೀಡಿದರು.

ರಾಷ್ಟ್ರದ ಭವಿಷ್ಯದ ಹಿತಾಸಕ್ತಿ, ಅದರ ಸ್ವತಂತ್ರ ವಿದೇಶಾಂಗ ನೀತಿ, ಸಾರ್ವಬೌಮತೆ ಮತ್ತು ಏಶ್ಯ ರಾಜಕೀಯದಲ್ಲಿ ಅದರ ಸ್ಥಾನಮಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಒಪ್ಪಂದದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ವಿಜಾಗ್ ಪತ್ರಕರ್ತರ ವೇದಿಕೆ ಆಯೋಜಿಸಿದ್ದ ಪತ್ರಕರ್ತರ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಮತ್ತಷ್ಟು
ಮೇಲ್ಸೇತುವೆ ಕುಸಿದು 15 ಸಾವು
ವಾಜಪೇಯಿಗೆ ದ್ರೋಹ ಎಸಗಿದೆ; ಷರೀಫ್
ಪಂಜಾಬ್ ಮಾಜಿ ಡಿಜಿಪಿ ಬಂಧನ
ಹೈದರಾಬಾದ್ ಸ್ಫೋಟ: ಮಹಿಳೆಯೊರ್ವಳ ಬಂಧನ
ನೆಲ್ಲೊರ್ ಸ್ಪೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಕೆ
ಅಧೀರ್ ಚೌಧರಿಗೆ ನ್ಯಾಯಾಂಗ ಬಂಧನ