ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಡಿದ ಸ್ಫೋಟಕ:ಮಹಿಳಾ ಪೊಲೀಸ್‌ಗೆ ಗಾಯ
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಲ್ಲಿಗೆ ಆಗಮಿಸುವ ಕೆಲವೇ ಗಂಟೆಗಳ ಮುಂಚೆ, ಉಗ್ರಗಾಮಿಗಳು ಸಿಆರ್‌ಪಿಎಫ್ ವಾಹನಕ್ಕೆ ಸ್ಫೋಟಕ ಸಿಡಿಸಿ ಮಹಿಳಾ ಪೊಲೀಸರೊಬ್ಬರು ಗಾಯಗೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕೈದಿಗಳನ್ನು ಒಯ್ಯುತ್ತಿದ್ದ ಸಿಆರ್‌ಪಿಎಫ್ ವಾಹನ ಹಾದು ಹೋಗುವಾಗ ಕಾಟಿದರ್ವಾಜಾದ ರಸ್ತೆದಿಯಲ್ಲಿ ಉಗ್ರಗಾಮಿಗಳು ಸುಧಾರಿತ ಸ್ಫೋಟಕ ಉಪಕರಣವನ್ನು ಸಿಡಿಸಿದರು ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಮತ್ತು ಸಿಆರ್‌ಪಿಎಫ್ ಪ್ರದೇಶವನ್ನು ಸುತ್ತುವರಿದು ಉಗ್ರಗಾಮಿಗಳನ್ನು ಹಿಡಿಯಲು ಬೇಟೆ ಆರಂಭಿಸಿದ್ದಾರೆ ಎಂದು ಅವು ತಿಳಿಸಿವೆ. ಈ ದಾಳಿಗೆ ಯಾವುದೇ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತಿಲ್ಲ. ಸೋನಿಯಾ ಗಾಂಧಿ ಸಂಜೆಗೆ ಮಹಿಳಾ ರಾಲಿಯಲ್ಲಿ ಭಾಗವಹಿಸುವ ಸಲುವಾಗಿ ಇಲ್ಲಿಗೆ ಆಗಮಿಸಲಿದ್ದಾರೆ.
ಮತ್ತಷ್ಟು
ಸಮಿತಿಯ ವರದಿ ಗಣನೆ: ಸಿಪಿಎಂ ಸಲಹೆ
ಮೇಲ್ಸೇತುವೆ ಕುಸಿದು 15 ಸಾವು
ವಾಜಪೇಯಿಗೆ ದ್ರೋಹ ಎಸಗಿದೆ; ಷರೀಫ್
ಪಂಜಾಬ್ ಮಾಜಿ ಡಿಜಿಪಿ ಬಂಧನ
ಹೈದರಾಬಾದ್ ಸ್ಫೋಟ: ಮಹಿಳೆಯೊರ್ವಳ ಬಂಧನ
ನೆಲ್ಲೊರ್ ಸ್ಪೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಕೆ