ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಸತ್ತಿನಲ್ಲಿ ಪುನಃ ಗದ್ದಲ
ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂಬ ಒತ್ತಾಯ ಸೋಮವಾರ ಕೂಡ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಪಟ್ಟು ಹಿಡಿದ ಪ್ರತಿಪಕ್ಷ ಸತತವಾಗಿ ಎರಡನೆ ವಾರವೂ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳಿಗೆ ಅಡ್ಡಿಪಡಿಸಿತು.

ಎರಡೂ ಸದನಗಳನ್ನು ಎರಡು ಬಾರಿ ಮುಂದೂಡಲಾಯಿತು. ಈ ಗದ್ದಲದ ನಡುವೆ ವೈಮಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಯಾವುದೇ ಚರ್ಚೆಯಿಲ್ಲದೇ ಅಂಗೀಕರಿಸಿತು. ಬಿಜೆಪಿ ಸದಸ್ಯರು ಸದನದ ಬಾವಿಗೆ ನುಗ್ಗಿ ಜೆಪಿಸಿ ರಚಿಸುವಂತೆ ಘೋಷಣೆಗಳನ್ನು ಕೂಗಿದರು.

ರಾಜ್ಯಸಭೆಯಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಘೋಷಣೆ ಕೂಗುತ್ತಾ ಬಿಜೆಪಿ, ಅಣ್ಣಾಡಿಎಂಕೆ ಮತ್ತು ಶಿವಸೇನೆ ಸದಸ್ಯರು ಸದನದ ಬಾವಿಗೆ ನುಗ್ಗಿದರು. ಈ ಗೊಂದಲದ ನಡುವೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮುಖ್ಯ ಮಸೂದೆಯನ್ನು ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಮಂಡಿಸಿದರು.

ಇದಕ್ಕೆ ಎಡ ಮತ್ತು ಎಸ್‌ಪಿ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು. ಕೃಷಿ ಮತ್ತು ಕೃಷಿಯೇತರ ಕಾರ್ಮಿಕರಿಗೆ ಪ್ರತ್ಯೇಕ ಮಸೂದೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಮತ್ತಷ್ಟು
ಸಿಡಿದ ಸ್ಫೋಟಕ:ಮಹಿಳಾ ಪೊಲೀಸ್‌ಗೆ ಗಾಯ
ಸಮಿತಿಯ ವರದಿ ಗಣನೆ: ಸಿಪಿಎಂ ಸಲಹೆ
ಮೇಲ್ಸೇತುವೆ ಕುಸಿದು 15 ಸಾವು
ವಾಜಪೇಯಿಗೆ ದ್ರೋಹ ಎಸಗಿದೆ; ಷರೀಫ್
ಪಂಜಾಬ್ ಮಾಜಿ ಡಿಜಿಪಿ ಬಂಧನ
ಹೈದರಾಬಾದ್ ಸ್ಫೋಟ: ಮಹಿಳೆಯೊರ್ವಳ ಬಂಧನ