ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಟಾರಾ ಕೊಲೆ ಪ್ರಕರಣ: ತಿರುಗಿ ಬಿದ್ದ ಸಾಕ್ಷಿ
ನಿತೀಶ್ ಕಟಾರಾ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿಯೊರ್ವ ನನ್ನ ಎದುರು ಹತ್ಯೆಗೆ ಬಳಸಲಾಗಿರುವ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿಲ್ಲ ಎಂದು ವಿಚಾರಣೆಯಲ್ಲಿ ಹೇಳಿದ್ದಾರೆ.

ನಿತೀಶ್ ಕಟಾರಾ ಕೊಲೆ ಪ್ರಕರಣದ ಆರೋಪಿ ವಿಕಾಸ ಯಾದವ, ಹತ್ಯೆಗೆ ಉಪಯೋಗಿಸಿದ್ದರು ಎನ್ನಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಕರೆದುಕೊಂಡು ಹೋಗಿರಲಿಲ್ಲ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಸತ್ಪಾಲ್ ಸಿಂಗ್ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾನೆ.

ಅಡಿಷನಲ್ ಸೆಸನ್ಸ್ ನ್ಯಾಯಾಧೀಶ ರವಿಂದರ್ ಕೌರ್ ಅವರ ಎದುರು ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿರುವ ಸತ್ಪಾಲ್ ಸಿಂಗ್ ಅವರು, ಫೆಬ್ರುವರಿ 28ರ ರಾತ್ರಿ ಪೊಲೀಸರು ಒತ್ತಾಯಪೂರ್ವಕವಾಗಿ ಆಯುಧ ವಶಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳಿಗೆ ಸಹಿ ಹಾಕುವಂತೆ ಹೇಳಿದರು.

ಸರಕಾರಿ ವಕೀಲರು ತಮ್ಮ ವಾದದಲ್ಲಿ ನಿತೀಶ್ ಹತ್ಯೆಗೆ ಬಳಸಲಾದ ಸುತ್ತಿಗೆಯನ್ನು ಸತ್ಪಾಲ್ ಹಾಜರಿಯಲ್ಲಿ ಪೊಲೀಸರು ಹಾಪುರ್ ಚುಂಗಿ ಪ್ರದೇಶದಲ್ಲಿ ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಸಲ್ಲಿಸಿದರು ಎಂದು ವಾದಿಸಿದರು.

ಹತ್ಯೆಯಾದ ಸ್ಥಳದಿಂದ ವಶಪಡಿಸಿಕೊಂಡಿರುವ ಕೈಗಡಿಯಾರದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಸತ್ಪಾಲ್ ಸಿಂಗ್ ಹೇಳಿದ್ದು, ಅಪಾದಿತ ವಿಕಾಸ್‌ನೊಂದಿಗೆ ನ್ಯಾಯವಾದಿಯಾಗಿ ಫೆಬ್ರುವರಿ 27ರ ತನಕ ಇದ್ದೆ. ಆಯುಧವನ್ನು ಫೆಬ್ರುವರಿ 28 ರಂದು ವಶಪಡಿಸಿಕೊಳ್ಳಲಾಗಿದೆ ಆದ್ದರಿಂದ ಹತ್ಯೆಗೆ ಬಳಸಲಾಗಿರುವ ಆಯುಧ ಮತ್ತು ನನಗೆ ಸಂಬಂಧ ಇಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಚಾರಣಾ ನ್ಯಾಯಾಲಯವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಪಾಲ್ ಸಿಂಗ್ ಅವರನ್ನು ಸಾಕ್ಷಿಯಾಗಿ ಮೊದಲು ಪರಿಗಣಿಸಿರಲಿಲ್ಲ. ದೆಹಲಿ ಉಚ್ಚ ನ್ಯಾಯಾಲಯ ಸತ್ಪಾಲ್ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಆದೇಶ ನೀಡಿದ ನಂತರ ಸತ್ಪಾಲ್ ಹೇಳಿಕೆಯನ್ನು ನ್ಯಾಯಾಲಯ ಸಾಕ್ಷಿ ರೂಪದಲ್ಲಿ ಸೋಮವಾರ ಪಡೆದುಕೊಂಡಿತು.
ಮತ್ತಷ್ಟು
ಮಾತುಕತೆಗೆ ಅಡ್ಡಿ: ಬಿಜೆಪಿಗೆ ಸಿಪಿಎಂ ತರಾಟೆ
ಸಂಸತ್ತಿನಲ್ಲಿ ಪುನಃ ಗದ್ದಲ
ಸಿಡಿದ ಸ್ಫೋಟಕ:ಮಹಿಳಾ ಪೊಲೀಸ್‌ಗೆ ಗಾಯ
ಸಮಿತಿಯ ವರದಿ ಗಣನೆ: ಸಿಪಿಎಂ ಸಲಹೆ
ಮೇಲ್ಸೇತುವೆ ಕುಸಿದು 15 ಸಾವು
ವಾಜಪೇಯಿಗೆ ದ್ರೋಹ ಎಸಗಿದೆ; ಷರೀಫ್