ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರವಾಹ: 55,000 ಕುಟುಂಬಗಳು ಸಂತ್ರಸ್ತ
ಮಣಿಪುರದಲ್ಲಿ ತೀವ್ರ ಪ್ರವಾಹದ ದೆಸೆಯಿಂದ ತೌಬಾಲ್, ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ್ ಮತ್ು ಬಿಶ್ನೆಪುರ ಜಿಲ್ಲೆಗಳಲ್ಲಿ ಸುಮಾರು 55,000 ಕುಟುಂಬಗಳು ಸಂತ್ರಸ್ತವಾಗಿವೆ.

ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ವಿವಿಧ ಸಂಘಟನೆಗಳು ಸುಮಾರು 50 ಪರಿಹಾರ ಶಿಬಿರಗಳನ್ನು ಆರಂಭಿಸಿವೆ. ಅಕ್ಕಿ, ನೀರು ಮತ್ತು ಔಷಧಿಗಳನ್ನು ಈ ಜನರಿಗೆ ಒದಗಿಸಲಾಗಿದೆ.

ಸರ್ಕಾರ ಕೂಡ ಪ್ರವಾಹಪೀಡಿತ ಪ್ರದೇಶಗಳಿಗೆ ಸಾಗಿಸಲು ಭಾರೀ ಪ್ರಮಾಣದ ಬೇಳೆ, ಅಯೋಡಿನ್‌ಯುಕ್ತ ಉಪ್ಪು, ಬ್ಲೀಚಿಂಗ್ ಪುಡಿ. ಅಕ್ಕಿ ಮತ್ತು ಸಕ್ಕರೆಯನ್ನು ಸಿದ್ಧವಾಗಿಟ್ಟಿದೆ.

ಪ್ರವಾಹದಲ್ಲಿ ಮೃತಪಟ್ಟವರಿಗೆ ಬಿಡುಗಡೆ ಮಾಡಿದ ತಲಾ ಒಂದು ಲಕ್ಷ.ರೂ ಹೊರತುಪಡಿಸಿ,ಸಂತ್ರಸ್ತರ ಪರಿಹಾರಕ್ಕೆ 45 ಲಕ್ಷ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ.
ಮತ್ತಷ್ಟು
ಬಿಗಿಯಾದ ಎಡಪಕ್ಷಗಳ ನಿಲುವು
ಕಟಾರಾ ಕೊಲೆ ಪ್ರಕರಣ: ತಿರುಗಿ ಬಿದ್ದ ಸಾಕ್ಷಿ
ಮಾತುಕತೆಗೆ ಅಡ್ಡಿ: ಬಿಜೆಪಿಗೆ ಸಿಪಿಎಂ ತರಾಟೆ
ಸಂಸತ್ತಿನಲ್ಲಿ ಪುನಃ ಗದ್ದಲ
ಸಿಡಿದ ಸ್ಫೋಟಕ:ಮಹಿಳಾ ಪೊಲೀಸ್‌ಗೆ ಗಾಯ
ಸಮಿತಿಯ ವರದಿ ಗಣನೆ: ಸಿಪಿಎಂ ಸಲಹೆ