ಕಿರಣ್ ತರಬೇತಿ ವಿಮಾನವು ಮಂಗಳವಾರ ನಸುಕಿನಲ್ಲಿ ಅಪಘಾತಕ್ಕೀಡಾಗಿ ಪೈಲಟ್ ಮತ್ತು ತರಬೇತಿಗಾರ ಇಬ್ಬರೂ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿಗೆ 25 ಕಿಮೀ ದೂರದ ಹಕೀಮ್‌ಪೇಟ್ ವಾಯುನೆಲೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ತರಬೇತಿ ವಿಮಾನ ಅಪಘಾತ್ಕಕೀಡಾಯಿತು. . ಮೃತಪಟ್ಟ ಪೈಲಟ್ ಸ್ವ್ಕಾಡ್ರನ್ ಲೀ. ಜಗತ್ ಮತ್ತು ತರಬೇತಿಗಾರ ಪೈಲಟ್ ಪತಿ ಎಂದು ಗುರುತಿಸಲಾಗಿದೆ. ವಿಮಾನದ ಜತೆ ಮೃತರ ಶವಗಳೂ ಸಂಪೂರ್ಣ ಸುಟ್ಟು ಬೂದಿಯಾಗಿರುವುದರಿಂದ ಅವರ ದೇಹಗಳನ್ನು ಪತ್ತೆಹಚ್ಚಲಾಗಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಐಎಎಫ್ ಪೈಲಟ್‌ಗಳ ತರಬೇತಿಗೆ ಬಳಸುವ ಎಚ್‌ಎಎಲ್ ನಿರ್ಮಿತ ವಿಮಾನ ಹಕೀಮ್‌ಪೇಟ್ ತರಬೇತಿ ಅಕಾಡೆಮಿಯಿಂದ ಬೆಳಗಿನ ಜಾವ 3ಗಂಟೆಗೆ ಹೊರಟಿತು. ಅದು 6ರಿಂದ 7 ಕಿಮೀ ದೂರ ತೆರಳುವಷ್ಟರಲ್ಲಿ ಅಪಘಾತಕ್ಕೀಡಾಯಿತು ಎಂದು ಗೊತ್ತಾಗಿದೆ.
ವಿಮಾನವು ನಿರ್ಬಂಧಿತ ರಕ್ಷಣಾ ಪ್ರದೇಶದಲ್ಲಿ ಅಪಘಾತಕ್ಕೀಡಾದ್ದರಿಂದ ಗ್ರಾಮಸ್ಥರಿಗೆ ಅಪಾಯವಾಗಲಿಲ್ಲ. ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ್ಪಘಾತದ ಬಗ್ಗೆ ಮಾಗಹಿತಿ ನೀಡಿದರು.
ವಾಯುದಳದ ಸಿಬ್ಬಂದಿ ಇಡೀ ಪ್ರದೇಶಕ್ಕೆ ಕಾವಲು ಹಾಕಿ ವಿಮಾನ ಮತ್ತು ಪೈಲಟ್‌ಗಳ ಅವಶೇಷಗಳನ್ನು ಸಂಗ್ರಹಿಸಿದರು. ಅಪಘಾತಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
|