ಹಿಂದು ದೇವ-ದೇವತೆಗಳನ್ನು ಹೀನಾಯವಾಗಿ ಚಿತ್ರಿಸಿದ್ದ ಖ್ಯಾತ ಚಿತ್ರಕಲಾವಿದ ಎಂ ಎಫ್ ಹುಸ್ಸೆನ್ ವಿರುದ್ಧ ಜಾಮೀನು ರಹಿತ ವಾರಂಟನ್ನು ಮಹಾರಾಷ್ಟ್ರದ ಪಂಡರಪುರ ನ್ಯಾಯಾಲಯ ಜಾರಿ ಮಾಡಿದೆ. 2005ರಲ್ಲಿ ಹಿಂದು ದೇವತೆಗಳ ಚಿತ್ರಗಳನ್ನು ಅಕ್ಷೇಪಣಿಯ ರೀತಿಯಲ್ಲಿ ಹುಸ್ಸೇನ್ ಚಿತ್ರಿಸಿದ್ದರು.
ಸೆಪ್ಟಂಬರ್ 17 ರಂದು ರಾಜಾ ರವಿವರ್ಮ ಪ್ರಶಸ್ತಿ ಸ್ವೀಕರಿಸಲು ಆಗಮಿಸುತ್ತಿರುವ ಎಂ ಎಫ್ ಹುಸ್ಸೇನ್ ಅವರನ್ನು ಬಂಧಿಸಿ ಮಹಾರಾಷ್ಟ್ರದ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು ಎಂದು ಕೇರಳ ಸರಕಾರಕ್ಕೆ ಪಂಡರಪುರ ನ್ಯಾಯಾಲಯ ಹೇಳಿದೆ.
ಪತ್ರಕರ್ತ ದ್ವೈಪಾಯನ್ ವಾರ್ಧೇಕರ್ ಅವರು ಹುಸ್ಸೇನ್ ವಿರುದ್ಧ ಸಲ್ಲಿಸಿದ್ದ ವಿಚಾರಣೆಯನ್ನು 2005 ರಲ್ಲಿ ಕೈಗೆತ್ತಿಕೊಂಡ ನ್ಯಾಯಾಲಯ ಹುಸ್ಸೇನ್ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರು ಪಡಿಸುವಂತೆ ಸೂಚಿಸಿತ್ತು. ಹುಸ್ಸೇನ್ ಸದ್ಯ ಇಂಗ್ಲೆಂಡಿನಲ್ಲಿ ಇರುವುದರಿಂದ ಬಂಧನದ ಆದೇಶವನ್ನು ಜಾರಿ ಮಾಡಲು ಮಹಾರಾಷ್ಟ್ರ ಪೊಲೀಸರಿಂದ ಆಗಿರಲಿಲ್ಲ.
ವಾರ್ಧೇಕರ್ ಅವರು, 2006 ರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು ಈಗ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
|