ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಆರೋಪಿ,ಎಲ್‌ಟಿಟಿಇಯ ಉನ್ನತ ಭಯೋತ್ಪಾದಕ ಕುಮಾರನ್ ಪದ್ಮನಾಥನ್ ಆಲಿಯಾಸ್ ಕೆಪಿಯನ್ನು ಬ್ಯಾಂಕಾಕ್‌ನಲ್ಲಿ ಬಂಧಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದಂದು ಕುಮಾರನ್ ಎಂಬಾತನನ್ನು ಬಂಧಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಕೂಡಲೇ ಥೈಲ್ಯಾಂಡ್ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ,ರಾಜೀವ್ ಗಾಂಧಿ ಹತ್ಯಾ ಪ್ರಕರಣದ ವಿವರವನ್ನು ನೀಡಿ, ಭಾರತದಲ್ಲಿ ಆತನ ವಿಚಾರಣೆ ನಡೆಸುವ ಅಂಗವಾಗಿ ತಮಗೆ ಹಸ್ತಾಂತರಿಸುವಂತೆ ಕೋರಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ತಮಿಳುನಾಡಿನ ಶ್ರೀಪೆರುಂಬುದೂರ್ ಎಂಬಲ್ಲಿ 1991 ಮೇ 21ರಂದು ಚುನಾವಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ,ಪ್ರಧಾನಿ ರಾಜೀವ್ ಗಾಂಧಿಯವರನ್ನು ಮಾನವ ಹತ್ಯಾ ಬಾಂಬ್ ಮೂಲಕ ಹತ್ಯೆಗೈಯಲಾಗಿತ್ತು.1998ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 26ಮಂದಿಯನ್ನು ಆರೋಪಿತರೆಂದು ಘೋಷಿಸಲಾಗಿತ್ತು.
ಮಾರಕ ಶಸ್ತ್ರಾಸ್ತ್ರಗಳ ಮದ್ದುಗುಂಡು ಸರಬರಾಜು ಚಟುವಟಿಕೆಯಲ್ಲಿ ಎಲ್‌ಟಿಟಿಇಯ ಪದ್ಮನಾಥನ್ ಮತ್ತು ಮೂವರು ಸೇರಿದಂತೆ ಥೈಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸರಕಾರ ತಿಳಿಸಿದೆ.
ಎಲ್‌ಟಿಟಿಇಯ ಕುಮಾರನ್ ಪದ್ಮನಾಥನ್ ''ಮೋಸ್ಟ್ ವಾಂಟೆಡ್ '' ವ್ಯಕ್ತಿಯಾಗಿದ್ದನೆಂದು ಇಂಟರ್‌ಪೋಲ್ ಘೋಷಿಸಿತ್ತು.ಈತ ಎಲ್‌ಟಿಟಿಇಯ ಜಾಗತಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ.
ಅಲ್ಲದೇ ಎಲ್‌ಟಿಟಿಇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು,ಅದರಲ್ಲಿ ಒಂದು ಕೆಪಿ ಹಾಗೂ ಅಯ್ಯನ್ನಾ ಸಂಘಟನೆಯಾಗಿದೆ ಎಂದು ಲಂಡನ್ ಮೂಲದ ಪತ್ರಿಕೆಯೊಂದು ಇತ್ತೀಚೆಗೆ ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು.
|