ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಲಕಾರ್ಮಿಕತನದ ವಿರುದ್ಧ ಆಕ್ರೋಶಕ್ಕೆ ಕರೆ
ಬಾಲ ಸೇವಕರನ್ನು ದುಡಿಮೆಗೆ ಹಚ್ಚಲು ಭಾರತದ ಮಧ್ಯಮವರ್ಗದ ಜನರು ನಿರಾಕರಿಸಬೇಕು ಮತ್ತು ಬಾಲಕಾರ್ಮಿಕತನದ ವಿರುದ್ಧ ನೈತಿಕ ಆಕ್ರೋಶದ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮಕ್ಕಳು ಹಕ್ಕುಗಳ ರಕ್ಷಣೆ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ.

ಇಲ್ಲಿಯವರೆಗೆ ಭಾರತೀಯ ಸಮಾಜದ ಬಹುತೇಕ ಎಲ್ಲ ವರ್ಗಗಳು ಬಾಲ ಕಾರ್ಮಿಕರ ಶೋಷಣೆಯ ಮೇಲೆ ಅವಲಂಬಿತವಾಗಿದೆ ಎಂದು ಶಾಂತಾ ಸಿನ್ಹಾ ಹೇಳಿದರು.
ಮಕ್ಕಳ ಶೋಷಣೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ನಾವು ಗುರುತಿಸಬೇಕು.

ಮಕ್ಕಳು ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡದಿದ್ದರೆ ನಾವಿಲ್ಲಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ. ಗೋಧಿ, ಅನ್ನ ಮತ್ತು ತರಕಾರಿ ಆಹಾರ ತಯಾರಿಕೆಯಲ್ಲಿ ಮಕ್ಕಳು ಕೆಲಸ ಮಾಡಿರದಿದ್ದರೆ ನಮಗೆ ಚಹಾ ಕೂಟವೇ ಇರುತ್ತಿರಲಿಲ್ಲ ಎಂದು ಅವರು ಬಾಲಕಾರ್ಮಿಕರು ನಿತ್ಯಜೀವನದಲ್ಲಿ ಪಡುವ ಬವಣೆ ಬಗ್ಗೆ ಹೇಳಿದರು.

14ರ ವಯೋಮಾನಕ್ಕಿಂತ ಕೆಳಗಿನ 12 ದಶಲಕ್ಷ ಮಕ್ಕಳನ್ನು ದುಡಿಮೆಗೆ ಹಚ್ಚಲಾಗಿರುವುದು ಹಿಂದಿನ ಜನಗಣತಿಯಲ್ಲಿ ತಿಳಿದುಬಂದಿದೆ. ಹೊಟೆಲ್‌ಗಳು, ಗದ್ದೆಗಳು, ಕಾರ್ಖಾನೆಗಳಲ್ಲಿ ಮತ್ತು ಮನೆಗಳಲ್ಲಿ ಅಗ್ಗದಲ್ಲಿ , ಅಕ್ರಮವಾಗಿ ದುಡಿಸಿಕೊಳ್ಳಲಾಗುತ್ತಿದೆ.

ಆದರೆ ಮಧ್ಯಮವರ್ಗದ ಜನರು ಕೂಡ ತಮ್ಮ ಮನೆಗಳಲ್ಲಿ ಸೇವಕರಂತೆ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಸಿನ್ಹಾ ಹೇಳಿದರು.
ಮತ್ತಷ್ಟು
ರಾಜೀವ್ ಹತ್ಯಾ ಆರೋಪಿ ಪದ್ಮನಾಥನ್ ಸೆರೆ
ಎಂ ಎಫ್ ಹುಸ್ಸೇನ್ ವಿರುದ್ಧ ಜಾಮೀನು ರಹಿತ ವಾರಂಟ್
ಕಿರಣ್ ವಿಮಾನ ಅಪಘಾತ: ಇಬ್ಬರ ಸಾವು
ಪ್ರವಾಹ: 55,000 ಕುಟುಂಬಗಳು ಸಂತ್ರಸ್ತ
ಬಿಗಿಯಾದ ಎಡಪಕ್ಷಗಳ ನಿಲುವು
ಕಟಾರಾ ಕೊಲೆ ಪ್ರಕರಣ: ತಿರುಗಿ ಬಿದ್ದ ಸಾಕ್ಷಿ