1993ರ ಮುಂಬೈ ಸ್ಫೋಟಗಳ ಪ್ರಕರಣದಲ್ಲಿ ತಪ್ಪಿತಸ್ಥರಾದ 100 ಜನರಿಗೆ ಮುಂಬೈನ ನಿಯೋಜಿತ ಟಾಡಾ ನ್ಯಾಯಾಲಯ ಬುಧವಾರ ತೀರ್ಪಿನ ಪ್ರತಿಗಳನ್ನು ಹಸ್ತಾಂತರಿಸಲಿದೆ.
ಆದರೆ ಈ ಪ್ರಕರಣದಲ್ಲಿ ದೋಷಮುಕ್ತರಾದ 23 ಜನರು ತೀರ್ಪಿನ ಪ್ರತಿಗೆ ತಲಾ 24,000 ರೂ. ನೀಡಬೇಕು ಮತ್ತು ತಪ್ಪಿತಸ್ಥರಿಗೆ ಉಚಿತವಾಗಿ ಒದಗಿಸಲಾಗುವುದು. 6000 ಪುಟಗಳ ತೀರ್ಪಿನ ಪ್ರತೀ ಪುಟಕ್ಕೆ ನಾಲ್ಕು ರೂ. ದರ ವಿಧಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಜಾಮೀನಿನಿಂದ ಪ್ರಸಕ್ತ ಬಂಧಮುಕ್ತನಾಗಿರುವ ಸಂಜಯ್ ದತ್‌ಗೆ ಸೆ.27ರಂದು ಪ್ರತಿಯನ್ನು ನೀಡಲಾಗುವುದು.
|