ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಜಾ ರವಿವರ್ಮ ಪ್ರಶಸ್ತಿ ವಿವಾದ
ಹುಸ್ಸೇನ್‌ಗೆ ಪ್ರಶಸ್ತಿ ನೀಡದಂತೆ ಹೈಕೋರ್ಟ್ ಆದೇಶ
ಚಿತ್ರಕಲಾವಿದ ಎಂ ಎಪ್ ಹುಸ್ಸೇನ್‌ಗೆ ಕೇರಳ ಸರಕಾರದ ರಾಜಾ ರವಿವರ್ಮ ಪ್ರಶಸ್ತಿ ನೀಡದಂತೆ ಸರಕಾರಕ್ಕೆ ಅಲ್ಲಿನ ಉಚ್ಚ ನ್ಯಾಯಾಲಯ ಆದೇಶಿಸಿದೆ. ಸೆಪ್ಟಂಬರ್ 17ರಂದು ರಾಜಾ ರವಿವರ್ಮ ಪ್ರಶಸ್ತಿಯನ್ನು ಸಮಾರಂಭವೊಂದರಲ್ಲಿ ಸರಕಾರ ನೀಡುವುದಾಗಿ ಪ್ರಕಟಿಸಿತ್ತು.

ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಮತ್ತು ನ್ಯಾಯಮೂರ್ತಿ ಕೆ ಟಿ ಶಂಕರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ತಮ್ಮನಮ್‌ನ ರಾಜಾ ರವಿವರ್ಮ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸರಕಾರದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಲಾವಿದ ಎಂ ಎಫ್ ಹುಸ್ಸೇನ್ ಅವರು ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಭಾರತ ಮಾತೆ, ಹಿಂದು ದೇವ ದೇವತೆಗಳನ್ನು ಉದ್ದೇಶಪೂರ್ವಕವಾಗಿ ಕೀಳಾಗಿ ಚಿತ್ರಿಸಿದ್ದಾರೆ. ಆದ್ದರಿಂದ ಪ್ರತಿಷ್ಟೀತ ಪ್ರಶಸ್ತಿಯನ್ನು ಸರಕಾರ ಅವರಿಗೆ ನೀಡದಂತೆ ತಡೆಯಬೇಕು ಎಂದು ಕೋರಲಾಗಿತ್ತು.

ಹಿಂದು ಧರ್ಮದ ದೇವ-ದೇವತೆಗಳ ಬಗ್ಗೆ ಕಲಾವಿದನಿಗೆ ಅಗೌರವ ಇದ್ದು ಅಂತಹ ವ್ಯಕ್ತಿಗೆ ಖ್ಯಾತ ಕಲಾವಿದನ ಹೆಸರಿನಲ್ಲಿ ಇರುವ ಪ್ರಶಸ್ತಿ ನೀಡಬಾರದು ಎಂದು ಸರಕಾರವನ್ನು ಹಲವಾರು ಸಂಘಟನೆಗಳು ಹಲವಾರು ಬಾರಿ ಕೇಳಿಕೊಂಡರೂ ಅಚ್ಯುತಾನಂದನ್ ಸರಕಾರ ಮನವಿಗೆ ಕಿವಿಗೊಡದೇ ತನ್ನ ತೀರ್ಮಾನಕ್ಕೆ ಅಂಟಿಕೊಂಡಿತ್ತು.
ಮತ್ತಷ್ಟು
ರೈತರಿಗೆ ಜೀವನ ಭದ್ರತೆ:ಪ್ರಧಾನಿ
100 ಜನರಿಗೆ ಇಂದು ತೀರ್ಪಿನ ಪ್ರತಿ
ಬಾಲಕಾರ್ಮಿಕತನದ ವಿರುದ್ಧ ಆಕ್ರೋಶಕ್ಕೆ ಕರೆ
ರಾಜೀವ್ ಹತ್ಯಾ ಆರೋಪಿ ಪದ್ಮನಾಥನ್ ಸೆರೆ
ಎಂ ಎಫ್ ಹುಸ್ಸೇನ್ ವಿರುದ್ಧ ಜಾಮೀನು ರಹಿತ ವಾರಂಟ್
ಕಿರಣ್ ವಿಮಾನ ಅಪಘಾತ: ಇಬ್ಬರ ಸಾವು