ಇಂಡೋನೆಷಿಯಾದ ಮತ್ತು ಸುಮಾತ್ರಾ ದ್ವೀಪದ ಬಳಿ ಸಂಭವಿಸಿದ ಭಾರಿ ಪ್ರಮಾಣದ ಭೂಕಂಪ, ಶ್ರೀಲಂಕಾ,ಭಾರತ ಮತ್ತು ಇಂಡೋನೆಷಿಯಾಗಳಲ್ಲಿ ಸುನಾಮಿ ಭಯ ಹುಟ್ಟುಹಾಕಿದೆ ಎಂದು ಅಧಿಕಾರಿಗಳು ಹೇಳಿದ್ದು, ಸಾವು-ನೋವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ.
ಪಶ್ಟಿಮ ಸುಮಾತ್ರಾ ಮತ್ತು ಇಂಡೋನೆಷಿಯಾದಲ್ಲಿ ಭೂಕಂಪ ಉಂಟಾಗಿದ್ದು ಭೂಕಂಪದ ಪ್ರಮಾಣ 7.9 ರಷ್ಟು ಇತ್ತು ಎಂದು ಟಿ ವಿ ಚಾನೆಲ್ ವರದಿ ಮಾಡಿದೆ. ಪಶ್ಚಿಮ ಸುಮಾತ್ರಾದ ರಾಜಧಾನಿ ಪಡಂಗ್‌ನಲ್ಲಿ ಭೂಕಂಪಕ್ಕೆ ಹಲವಾರು ಕಟ್ಟಡಗಳು ಬಲಿಯಾಗಿ ನೆಲಸಮಗೊಂಡಿವೆ.
ಭೂಕಂಪದ ಕೇಂದ್ರ ದಕ್ಷಿಣ ಸುಮಾತ್ರಾದಿಂದ ನೈಋತ್ಯಕ್ಕಿರುವ ಬೆಂಗಕು ಎಂದು ಇಂಡೋನೆಷ್ಯಾದ ಹವಾಮಾನ ಇಲಾಖೆಯ ಅಧಿಕಾರಿಗಳು ರವಾನಿಸಿದ ತುರ್ತು ಸಂದೇಶದಲ್ಲಿ ತಿಳಿಸಿದ್ದಾರೆ. ಇಂಡೋನೆಷ್ಯಾ ಅಲ್ಲದೇ ನೆರೆಯ ರಾಷ್ಟ್ರಗಳಾದ ಮಲೇಷಿಯಾ, ಥೈಲ್ಯಾಂಡ್ ಮತ್ತು ಸಿಂಗಪೂರ್‌ಗಳಲ್ಲಿ ಕೂಡ ಅಲ್ಪ ಪ್ರಮಾಣದ ಭೂಕಂಪ ಉಂಟಾಗಿದೆ ಎಂದು ವರದಿಯಾಗಿದೆ.
|