ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮಸೇತು:ವೈಜ್ಞಾನಿಕ ಸಾಕ್ಷ್ಯಾಧಾರವಿಲ್ಲ
ರಾಮ ಅಥವಾ ರಾಮಾಯಣದಲ್ಲಿನ ಇತರ ಪಾತ್ರಗಳು ಅಸ್ತಿತ್ವದಲ್ಲಿದ್ದುದನ್ನು ರುಜುವಾತುಪಡಿಸುವ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸರ್ವೊಚ್ಛನ್ಯಾಯಾಲಯಕ್ಕೆ ತಿಳಿಸಿದೆ.

ಸೇತು ಸಮುದ್ರ ಯೋಜನೆ ಕುರಿತ ವಿವಾದವು ಪರಾಕಾಷ್ಠೆಗೇರಿರುವ ಸಂದರ್ಭದಲ್ಲಿ ಸರ್ವೊಚ್ಛನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡಾವಿಟ್‌ನಲ್ಲಿ ಅದು ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟಿರುವ ರಾಮ ಸೇತುವಿನ ಅಸ್ತಿತ್ವವನ್ನೂ ತಿರಸ್ಕರಿಸಿದೆ.

ರಾಮನೂ ಇಲ್ಲ,ರಾಮಾಯಣವೂ ಇಲ್ಲ,ರಾಮ ಸೇತು ಇದ್ದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಾಚ್ಯ ವಸ್ತು ಇಲಾಖೆ ಸರಕಾರದ ಪರವಾಗಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದೆ.
ರಾಮಸೇತು ಮಾನವ ನಿರ್ಮಿತವಲ್ಲ ,ಬದಲಾಗಿ ಅದು ನೈಸರ್ಗಿಕವಾಗಿ ರೂಪುಗೊಂಡು ರಚನೆಯಾಗಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.

ರಾಮನ ಅಥವಾ ಇತರ ಪೌರಾಣಿಕ ಪಾತ್ರಗಳು ಅಸ್ತಿತ್ವದಲ್ಲಿದ್ದುದನ್ನು ಅಥವಾ ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಘಟನಾವಳಿಗಳು ನಡೆದಿರುವುದನ್ನು ನಿಸ್ಸಂದಿಗ್ದವಾಗಿ ಸಾಬೀತುಪಡಿಸುವ ಐತಿಹಾಸಿಕ ದಾಖಲೆ ಲಭ್ಯವಿಲ್ಲ ಎಂದು ಎಎಸ್‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಮಸೇತು ಇರುವ ಸ್ಥಳದಲ್ಲಿ ಈಗ ನೌಕಾ ಯಾನಕ್ಕಾಗಿ ಅವಕಾಶ ಕಲ್ಪಿಸುವುದಕ್ಕೋಸ್ಕರ ಕಾಲುವೆ ನಿರ್ಮಿಸಲು ಸೇತು ಸಮುದ್ರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗದೆ.ರಾಮಸೇತುವೆಯನ್ನು ಧ್ವಂಸಗೊಳಿಸಿ ಈ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.ಈ ಬಗ್ಗೆ ದೇಶಾದ್ಯಂತ ಪ್ರತಿಭಟನೆಯೂ ನಡೆಯುತ್ತಿದೆ.
ಮತ್ತಷ್ಟು
ಇಂಡೊನೇಷಿಯಾದಲ್ಲಿ ಭೂಕಂಪ
ರಾಜಾ ರವಿವರ್ಮ ಪ್ರಶಸ್ತಿ ವಿವಾದ
ರೈತರಿಗೆ ಜೀವನ ಭದ್ರತೆ:ಪ್ರಧಾನಿ
100 ಜನರಿಗೆ ಇಂದು ತೀರ್ಪಿನ ಪ್ರತಿ
ಬಾಲಕಾರ್ಮಿಕತನದ ವಿರುದ್ಧ ಆಕ್ರೋಶಕ್ಕೆ ಕರೆ
ರಾಜೀವ್ ಹತ್ಯಾ ಆರೋಪಿ ಪದ್ಮನಾಥನ್ ಸೆರೆ