ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮನ ಅಸ್ತಿತ್ವ: ಬಿಜೆಪಿ ಎಚ್ಚರಿಕೆ
ಅಯೋಧ್ಯ ರಾಮಮಂದಿರದ ಆಂದೋಳನದ ನೆನಪುಗಳಿಗೆ ಪುನರ್ಜೀವ ನೀಡಿರುವ ಬಿಜೆಪಿ, ಭಗವಾನ್ ರಾಮನ ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರಸರ್ಕಾರಕ್ಕೆ ಗುರುವಾರ ಆಗ್ರಹಿಸಿದೆ.

ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಐತಿಹಾಸಿಕ ಪುರಾವೆ ಇಲ್ಲವೆಂದು ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ಹಿಂತೆಗೆದುಕೊಳ್ಳದಿದ್ದರೆ ರಾಷ್ಟ್ರವ್ಯಾಪಿ ಆಂದೋಳನ ಆರಂಭಿಸುವುದಾಗಿ ಅದು ಎಚ್ಚರಿಕೆ ನೀಡಿದೆ.

ಪಕ್ಷದ ಪದಾಧಿಕಾರಿಗಳ ಜತೆ ಈ ಕುರಿತು ಚರ್ಚಿಸುವಂತೆ ರಾಮ ಮಂದಿರ ಆಂದೋಳನದ ಸಾರಥ್ಯ ವಹಿಸಿದ್ದ ಆಡ್ವಾಣಿ ಅವರಿಗೆ ದೂರವಾಣಿಯಲ್ಲಿ ಮನವಿ ಮಾಡಿರುವುದಾಗಿ ಗುವಾಹಟಿಯಲ್ಲಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದರು.

ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಭಗವಾನ್ ರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಇಂತಹ ಅಸಂಬದ್ಧ ಪ್ರಮಾಣಪತ್ರವನ್ನು ತಕ್ಷಣವೇ ಹಿಂತೆಗೆದುಕೊಳ್ಳದಿದ್ದರೆ ನಾವು ರಾಷ್ಟ್ರವ್ಯಾಪಿ ಆಂದೋಳನ ನಡೆಸುವುದಾಗಿ ಅವರು ದೂರಿದ್ದಾರೆ.
ಮತ್ತಷ್ಟು
ರಾಮಸೇತು:ವೈಜ್ಞಾನಿಕ ಸಾಕ್ಷ್ಯಾಧಾರವಿಲ್ಲ
ಇಂಡೊನೇಷಿಯಾದಲ್ಲಿ ಭೂಕಂಪ
ರಾಜಾ ರವಿವರ್ಮ ಪ್ರಶಸ್ತಿ ವಿವಾದ
ರೈತರಿಗೆ ಜೀವನ ಭದ್ರತೆ:ಪ್ರಧಾನಿ
100 ಜನರಿಗೆ ಇಂದು ತೀರ್ಪಿನ ಪ್ರತಿ
ಬಾಲಕಾರ್ಮಿಕತನದ ವಿರುದ್ಧ ಆಕ್ರೋಶಕ್ಕೆ ಕರೆ