ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಶ್ಫಖ್‌ಗೆ ಗಲ್ಲುಶಿಕ್ಷೆ ಊರ್ಜಿತ
ಕೆಂಪುಕೋಟೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಗುರುವಾರ ಲಷ್ಕರೆ ತೊಯ್ಬಾ ಉಗ್ರಗಾಮಿ ಮೊಹಮದ್ ಅಶ್ಫಖ್‌ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಊರ್ಜಿತಗೊಳಿಸಿದೆ ಮತ್ತು ವಿವಿಧ ಅವಧಿಯ ಜೈಲು ಶಿಕ್ಷೆಗಳಿಗೆ ಒಳಗಾಗಿದ್ದ ಇನ್ನೂ ಆರು ಮಂದಿಯನ್ನು ಖುಲಾಸೆಗೊಳಿಸಿದೆ.

ಕೆಂಪುಕೋಟೆಯಲ್ಲಿ 2000ದ ಡಿಸೆಂಬರ್ 22ರಂದು ರಾತ್ರಿ ಕೆಂಪುಕೋಟೆಯ ಮೇಲೆ ದಾಳಿ ಮಾಡಿ ಇಬ್ಬರು ಸೇನಾ ಯೋಧರ ಸಹಿತ ಮೂವರ ಹತ್ಯೆಗೆ ಸಂಬಂಧಪಟ್ಟಂತೆ ವಿಚಾರಣೆ ನ್ಯಾಯಾಲಯವೊಂದು ಅಶ್ಫಖ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಅಶ್ಫಖ್ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರದೊಂದಿಗೆ ಪ್ರಾಸಿಕ್ಯೂಷನ್ ಸಾಬೀತುಮಾಡಿದೆ ಎಂದು ಪೀಠ ತಿಳಿಸಿದೆ. ಉಳಿದ ಆರೋಪಿಗಳಿಗೆ ಸಂಬಂಧಪಟ್ಟಂತೆ ಘಟನಾವಳಿಗಳ ಸರಪಣಿಯನ್ನು ಅಂತ್ಯಗೊಳಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದೂ ಪೀಠ ಅಭಿಪ್ರಾಯಪಟ್ಟಿದೆ.
ಮತ್ತಷ್ಟು
ರಾಮನ ಅಸ್ತಿತ್ವ: ಬಿಜೆಪಿ ಎಚ್ಚರಿಕೆ
ರಾಮಸೇತು:ವೈಜ್ಞಾನಿಕ ಸಾಕ್ಷ್ಯಾಧಾರವಿಲ್ಲ
ಇಂಡೊನೇಷಿಯಾದಲ್ಲಿ ಭೂಕಂಪ
ರಾಜಾ ರವಿವರ್ಮ ಪ್ರಶಸ್ತಿ ವಿವಾದ
ರೈತರಿಗೆ ಜೀವನ ಭದ್ರತೆ:ಪ್ರಧಾನಿ
100 ಜನರಿಗೆ ಇಂದು ತೀರ್ಪಿನ ಪ್ರತಿ