ಇಂಡೋನೇಶಿಯಾ ಸುನಾಮಿ ಮುನ್ನೆಚ್ಚರಿಕೆ ನೀಡಿದ ಮರುದಿನವೇ ಭಾರತ ತನ್ನ ಪೂರ್ವ ಕರಾವಳಿ ತೀರದ ಜನರಿಗೆ ಕಟ್ಟೆಚ್ಚರದ ಸಂದೇಶ ನೀಡಿದೆ."ಸುನಾಮಿ ಅಲೆಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ ಭಾರತದ ಕರಾವಳಿ ತೀರದಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ತೀರಪ್ರದೇಶದ ಜನರ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಅವಶ್ಯಕ ಕ್ರಮ ಕೈಗೊಳ್ಳಬೇಕು" ಎಂದು ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರದ ನಿರ್ದೇಶಕ ಟಿ. ವೆಂಕಟೇಶ್ವರ ರಾವ್ ಹೇಳಿದ್ದಾರೆ.
ದಕ್ಷಿಣ ಸುಮಾತ್ರವನ್ನು ಬುಧವಾರ ಅಪ್ಪಳಿಸಿದ 8.4 ತೀವ್ರತೆಯ ಭೂಕಂಪ ವಿಶ್ವದಲ್ಲಿ 2007ರಲ್ಲಿ ಸಂಭವಿಸಿದ ಶೇ.8ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪದಲ್ಲಿ ಅತೀ ದೊಡ್ಡ ಪ್ರಮಾಣದ್ದಾಗಿದೆ. ಪಶ್ಚಿಮ ಸುಮಾತ್ರದಲ್ಲಿ ಗುರುವಾರ ಇನ್ನೊಂದು ಭೂಕಂಪ ಅಪ್ಪಳಿಸಿದ ಬಳಿಕ ಹವಾಮಾನ ಇಲಾಖೆ ಸುನಾಮಿ ಮುನ್ನೆಚ್ಚರಿಕೆ ನೀಡಿದೆ.
|