ಉತ್ತರ ಪ್ರದೇಶದ ಸರಯೂ ಘಾಟ ಬಳಿ ಎಕ್ಸಪ್ರೆಸ್ ರೈಲೊಂದು ಶಿವಭಕ್ತ ಕನ್ವಾರಿಗಳ ಮೇಲೆ ಹಾಯ್ದು ಹೊದ ಪರಿಣಾಮವಾಗಿ 16 ಕನ್ವಾರಿಗಳು ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದುರ್ಘಟನೆಯು ಲಖ್ನೊ- ಗೋರಖಪುರ್ ನಡುವೆ ಸಂಭವಿಸಿದೆ. ಸರಯೂ ನದಿಯ ಸೇತುವೆ ಮೇಲೆ ರೈಲು ನಿದಾನವಾಗಿ ಸಾಗುತ್ತಿದ್ದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಕನ್ವಾರಿಗಳ ಗುಂಪು ಸರಯೂ ನದಿಯ ನೀರನ್ನು ಶಿವನ ಪೂಜೆಗೆ ತೆಗೆದುಕೊಳ್ಳಲು ಇಳಿಯುತ್ತಿದ್ದಂತೆ, ಎದುರಿನಿಂದ ಬಂದ ಮತ್ತೊಂದು ರೈಲು ಹಳಿಗಳ ಮೇಲೆ ನಿಂತಿದ್ದ ಹದಿನಾರು ಜನರನ್ನು ಶಿವನ ಪಾದಕ್ಕೆ ಸೇರಿಸಿತು. ಅಪಾಯದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಪರಿಹಾರ ಕಾರ್ಯ ಮುಂದುವರಿದಿದ್ದು, ಸ್ಥಳಿಯ ಆಡಳಿತ ಚುರುಕಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಲ್ಲಿನ ನಾಗರಿಕರು ದೂರಿದ್ದಾರೆ. ಕಣ್ಣಾರೆ ದುರ್ಘಟನೆಯನ್ನು ನೋಡಿದ್ದೆವೆ. ಪೊಲೀಸರು ಮೊದಲು ಕೇವಲ ಏಳು ಮೃತದೇಹಗಳನ್ನು ಸಾಗಿಸಿದ್ದು, ನಂತರ ಇನ್ನುಳಿದ ಮೃತದೇಹಗಳನ್ನು ಸಾಗಿಸಿದ್ದಾರೆ. ಎಂದು ಪ್ರಯಾಣಿಕನೊಬ್ಬ ದೂರಿದ್ದಾನೆ.
ಸಹ ಶಿವಭಕ್ತ ಕನ್ವಾರಿಗಳ ಸಾವು ಇತರ ಕನ್ವಾರಿಗಳನ್ನು ಕನಲಿಸಿದೆ. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರುಗಳು, ರೈಲಿನ ಬೋಗಿಯೊಂದಕ್ಕೆ ಬೆಂಕಿ ಇಕ್ಕುವ ಪ್ರಯತ್ನ ಮಾಡಿದ್ದಾರೆ.
|