ವೈಶಾಲಿ ಜಿಲ್ಲೆಯಲ್ಲಿ 10 ಮಂದಿ ಶಂಕಿತ ಕಳ್ಳರಿಗೆ ಚಿತ್ರಹಿಂಸೆ ನೀಡಿ ಕೊಂದ ಘಟನೆಯ ತನಿಖೆ ನಡೆಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಪರಾಧ ತನಿಖಾ ಇಲಾಖೆಗೆ ತಿಳಿಸಿದ್ದಾರೆ.
ದೇಲ್ಪುರ್ವಾ ಗ್ರಾಮದಲ್ಲಿ ಪದೇ ಪದೇ ನಡೆಯುತ್ತಿದ್ದ ಕಳ್ಳತನಗಳಿಗೆ ಸಂಬಂಧಿಸಿದಂತೆ 10 ಜನರನ್ನು ಗುಂಪೊಂದು ಬರ್ಬರವಾಗಿ ಕೊಂದು ಮುಯ್ಯಿ ತೀರಿಸಿಕೊಂಡ ಬಳಿಕ ನಿತೀಶ್ ಕುಮಾರ್, ಗೃಹ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು ಮತ್ತು ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಆದೇಶಿಸಿದರು.
ವಿಧಿವಿಜ್ಞಾನ ತಜ್ಞರ ಜತೆ ಸ್ಥಳದಲ್ಲೇ ಬೀಡುಬಿಡುವಂತೆ ಸಿಐಡಿಯ ಹೆಚ್ಚುವರಿ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನಾಲ್ಕು ದಿನಗಳಲ್ಲಿ ಅವರು ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದ್ದಾರೆ.
|