ಭಗವಾನ್ ರಾಮನ ಅಸ್ತಿತ್ವ ಮತ್ತು ರಾಮಸೇತು ಮಾನವ ನಿರ್ಮಿತ ಸೇತುವೆಯೆಂದು ಸ್ಥಿರಪಡಿಸುವ ಐತಿಹಾಸಿಕ ಅಥವಾ ವೈಜ್ಞಾನಿಕ ಪುರಾವೆ ಇಲ್ಲವೆಂದು ಪುರಾತತ್ವ ಸರ್ವೇಕ್ಷಣೆ ಇಲಾಖೆ ಸಲ್ಲಿಸಿದ್ದ ಎರಡು ಪ್ರಮಾಣಪತ್ರಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಹಿಂತೆಗೆದುಕೊಂಡಿದೆ.
ಎಎಸ್‌ಐ ಪ್ರಮಾಣಪತ್ರದಿಂದ ವಿವಾದ ಉದ್ಭವಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಮಾಣಪತ್ರ ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿತು.
ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರಿದ್ದ ಪೀಠವು ಪ್ರಮಾಣಪತ್ರ ಹಿಂದೆಗೆತಕ್ಕೆ ಕೇಂದ್ರಸರ್ಕಾರಕ್ಕೆ ಅವಕಾಶ ನೀಡಿ ರಾಮ ಸೇತು ನಿರ್ಮಾಣಕ್ಕೆ ತಡೆವಿಧಿಸಿದ ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದರು. ಕೋರ್ಟ್ ಮಧ್ಯಂತರ ಆದೇಶದಲ್ಲಿ ಹೂಳುತೆಗೆಯಲು ಅವಕಾಶ ನೀಡಿತ್ತು.
|