ರಾಯ್‌ಗಡದ ಕೇಂದ್ರೀಯ ಕಾರಾಗೃಹಕ್ಕೆ ತಪಾಸಣಾ ದಳ ದಾಳಿ ಮಾಡಿದಾಗ ಕೈದಿಗಳ ಸ್ವಾಧೀನದಲ್ಲಿ ಹಲವಾರು ಕಾನೂನು ಪುಸ್ತಕಗಳು ಮತ್ತು ಕ್ರಿಮಿನಲ್ ಪ್ರಕರಣಗಳ ಅನೇಕ ದಾಖಲೆಗಳು ಪತ್ತೆಯಾದವು. ಈ ದಾಳಿಯನ್ನು ಗುರುವಾರ 5 ಗಂಟೆಗೆ ನಡೆಸಲಾಯಿತು.
ಸೆಲ್‌ಫೋನ್‌ಗಳು, ಚಾರ್ಜರ್‌ಗಳು, ಸಿಗರೇಟ್‌ಗಳು, ತಂಬಾಕು ಉತ್ಪನ್ನಗಳು ಮತ್ತು ಕತ್ತರಿಗಳನ್ನು ಕೈದಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ರಾಯಗಢದ ಪೊಲೀಸ್ ಸೂಪರಿಂಟೆಂಡೆಂಟ್ ದೀಪಾನ್ಶು ಕಾಬ್ರಾ ತಿಳಿಸಿದರು.
ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಜೈಲಿನಲ್ಲಿರುವ ಸ್ಥಳೀಯ ವಕೀಲರೊಬ್ಬರ ಬಳಿ ಪುಸ್ತಕ ಮತ್ತು ದಾಖಲೆಗಳು ಪತ್ತೆಯಾದವು. ಇನ್ನೊಬ್ಬ ಕೈದಿ ಸೆಲ್‌ಫೋನ್‌ನಲ್ಲಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದನೆಂಬ ದೂರುಗಳ ಆಧಾರದ ಮೇಲೆ ಈ ದಾಳಿಯನ್ನು ನಡೆಸಲಾಯಿತು.
ಹಲವಾರು ದಿನಗಳವರೆಗೆ, ಜೈಲಿನೊಳಗೆ ಸೆಲ್‌ಪೋನ್‌ಗಳು, ಮಾದಕವಸ್ತು ಮತ್ತು ಚೂರಿಗಳ ದಾಸ್ತಾನಿದೆಯೆಂದು ನಮಗೆ ಮಾಹಿತಿಗಳು ಬರುತ್ತಿದ್ದವು ಎಂದು ಅವರು ಹೇಳಿದರು. ಕೆಲವು ಕಾವಲುಗಾರರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಜೈಲು ಅಧಿಕಾರಿಗಳು ಹೇಳಿದರು.
|