ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸತ್ತ ಮೇಲೂ ಐವರಿಗೆ ಜೀವದಾನ
ರಸ್ತೆ ಅಪಘಾತದಲ್ಲಿ ಮೃತಪಟ್ಟ 40 ವರ್ಷ ವಯಸ್ಸಿನ ಸೈನಿಕನೊಬ್ಬ ತನ್ನ ಅಂಗಾಂಗಗಳನ್ನು ಮರಣೋತ್ತರವಾಗಿ ದಾನ ಮಾಡಿ ಇತರೆ ಐದು ಮಂದಿಯ ಜೀವವುಳಿಸಿ ಅವರಿಗೆ ಆಶಾಕಿರಣವಾದ ಘಟನೆ ನಡೆದಿದೆ.

ಸೈನಿಕನ ಯಕೃತ್ತನ್ನು ಇನ್ನೊಬ್ಬ ಸೈನಿಕನಿಗೆ ಕಸಿ ಮಾಡಲಾಯಿತು ಮತ್ತು ಒಂದು ಮೂತ್ರಪಿಂಡವನ್ನು ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿರುವ ವಾಯುದಳದ ಸೇವೆಯಲ್ಲಿರುವ ಸಾರ್ಜೆಂಟ್‌ನ ಪತ್ನಿಗೆ ಕಸಿ ಮಾಡಲಾಗಿದೆ

. ಇನ್ನೊಂದು ಮೂತ್ರಪಿಂಡವನ್ನು 58 ವರ್ಷದ ಮೂತ್ರಪಿಂಡದ ವೈಫಲ್ಯಕ್ಕೆ ತುತ್ತಾದ ರೋಗಿಗೆ ಕಸಿ ಮಾಡಲಾಗಿದೆ. ಕಣ್ಣಿನ ಕಾರ್ನಿಯಾವನ್ನು ಇಬ್ಬರು ಸೂಕ್ತ ದಾನಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಲಾಗಿದೆ.

ಸೇನಾ ಪಡೆಗಳು ಅಂಗಾಂಗ ದಾನಕ್ಕೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಲು ಸೇನಾ ಪಡೆ ಅಂಗಾಂಗ ಕಸಿ ಪ್ರಾಧಿಕಾರವನ್ನು ಆರಂಭಿಸಿದೆ.
ಮತ್ತಷ್ಟು
ಕೈದಿಗಳ ಬಳಿ ಸೆಲ್‌ಪೋನ್
ಸೇತು: ಪ್ರಮಾಣಪತ್ರ ವಾಪಸ್
10 ಕಳ್ಳರ ಹತ್ಯೆ:ಸಿಐಡಿ ತನಿಖೆ
ಸೇತುಸಮುದ್ರಂ: ಪೂರಕ ಪ್ರಮಾಣಪತ್ರ
ಶಿವನ ಪಾದ ಸೇರಿದ ಕನ್ವಾರಿಗಳು
ರಾಮನು ಇಲ್ಲ ರಾಮಾಯಣವೂ ಇಲ್ಲೆಂದ ಸರಕಾರ