ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹೈದಾರಾಬಾದ್ ಸ್ಫೋಟ ರೂವಾರಿ ಭಿಲಾಲ್ ಕೊಲೆ
ಕೆಲವು ದಿನಗಳ ಹಿಂದೆ ಹೈದಾರಾಬಾದ್‌ನಲ್ಲಿ ನಡೆದ ಅವಳಿ ಸ್ಫೋಟದ ಪ್ರಮುಖ ಆರೋಪಿ ಶಹಿದ್ ಬಿಲಾಲ್‌ನನ್ನು ಐಎಸ್‌ಐ ಕರಾಚಿಯಲ್ಲಿ ಆಗಸ್ಟ್ 30ರಂದು ಹತ್ಯೆ ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಭಾರತೀಯ ಗುಪ್ತಚರ ಇಲಾಖೆ ಸಂಗ್ರಹಿಸಿರುವ ಮಾಹಿತಿ ಅನ್ವಯ ಪಾಕಿಸ್ತಾನದ ಗೂಡಚಾರ ಸಂಸ್ಥೆ ಐಎಸ್ಐ ಬಿಲಾಲ್‌ನನ್ನು ಕೊಲೆ ಮಾಡಿದೆ ಎಂದು ತಿಳಿಸಿದೆ. ಹೈದರಾಬಾದ್ ಸ್ಫೋಟದಲ್ಲಿ ತನ್ನ ಕೈವಾಡ ಇದ್ದುದು ಸಾಬೀತಾದರೆ ಪಾಕ್ ಅದ್ಯಕ್ಷ ಪರ್ವೇಜ್ ಮುಷರಫ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುವ ಭಯದಿಂದ ಸ್ಪೋಟದ ಪ್ರಮುಖ ರೂವಾರಿ ಬಿಲಾಲ್‌ನನ್ನು ಮುಗಿಸಿದೆ.

ಬಿಲಾಲ್ ಹತ್ಯೆ ಕುಖ್ಯಾತ ಕರಾಚಿ ನಗರದ ಗುಲಬರ್ಗ್ ಚುರಾಗಿ ಪ್ರದೇಶದಲ್ಲಿ ಆಗಿದೆ ಎಂದು ಅಲ್ಲಿನ ಸ್ಥಳಿಯ ಪತ್ರಿಕೆಯೊಂದು ವರದಿ ಮಾಡಿದೆ. ಮೊಟರ್ ಸೈಕಲ್ ಮೇಲೆ ಬಂದ ಇಬ್ಬರು ಅನಾಮಧೇಯ ಯುವಕರು ಸಂಶಯಿತ ಆರೋಪಿಯನ್ನು ಗುಂಡಿಕ್ಕಿ ಕೊಂದು, ಪರಾರಿಯಾಗಿದ್ದಾರೆ

ಹತ್ಯೆಗೆ ಇಡಾಗುವ ಮೊದಲು ಬಿಲಾಲ್ ಕೂಡ ಮೊಟಾರು ವಾಹನದಲ್ಲಿ ಸಾಗುತ್ತಿದ್ದ ಎನ್ನಲಾಗಿದೆ.ಹಿಂದಿನಿಂದ ಬಂದ ಜೋಡಿ ಸವಾರರು ಅತಿ ಸಮಿಪದಿಂದಲೇ ಗುಂಡಿನ ಮಳೆಗರೆದಿದ್ದರಿಂದ ಬಿಲಾಲ್ ಅಹ್ಮದ್ ಸ್ಥಳದಲ್ಲಿ ಸಾವಿಗಿಡಾಗಿದ್ದಾನೆ ಎಂದು ಪಾಕ್ ಮೂಲಗಳು ತಿಳಿಸಿವೆ.

ಆಗಸ್ಟ್ 25ರಂದು ಹೈದರಾಬಾದ್‌ನಲ್ಲಿ ನಡೆದ ಅವಳಿ ಸ್ಪೋಟದ ರೂವಾರಿಯಾಗಿರುವ ಬಿಲಾಲ್, ಮೆಕ್ಕಾ ಮಸ್ಜೀದ್ ಮತ್ತು 2005ರಲ್ಲಿ ಎಸ್‌ಟಿಎಫ್ ಹೆಡ್‌ಕ್ವಾರ್ಟರ್‌ ದಾಳಿಯ ಪ್ರಮುಖ ಆರೋಪಿ ಎಂದು ಶಂಕಿಸಲಾಗಿದೆ.
ಮತ್ತಷ್ಟು
ಸತ್ತ ಮೇಲೂ ಐವರಿಗೆ ಜೀವದಾನ
ಕೈದಿಗಳ ಬಳಿ ಸೆಲ್‌ಪೋನ್
ಸೇತು: ಪ್ರಮಾಣಪತ್ರ ವಾಪಸ್
10 ಕಳ್ಳರ ಹತ್ಯೆ:ಸಿಐಡಿ ತನಿಖೆ
ಸೇತುಸಮುದ್ರಂ: ಪೂರಕ ಪ್ರಮಾಣಪತ್ರ
ಶಿವನ ಪಾದ ಸೇರಿದ ಕನ್ವಾರಿಗಳು