ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಾರತದ ವಿದೇಶಾಂಗ ಕಾರ್ಯದರ್ಶಿಯ ನೇಪಾಳ ಭೇಟಿ
ಎರಡು ದಿನಗಳ ಪ್ರವಾಸಕ್ಕಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನೊನ್ ಅವರು ಶನಿವಾರ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ ತಮ್ಮ ಪ್ರವಾಸದಲ್ಲಿ ಅವರು ನೇಪಾಳ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ಸೇರಿದಂತೆ ನೇಪಾಳದ ಅನೇಕ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ನೇಪಾಳದಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆ, ತೆಹ್ರಿ ಆಣೆಕಟ್ಟು ಸಮಸ್ಯೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮತ್ತು ಹಿಂದು ರಾಷ್ಟ್ರದ ಅರಸೋತ್ತಿಗೆಯ ಮೇಲೆ ಸರಕಾರದ ನಿಯಂತ್ರಣ ಮತ್ತು ಅದರಿಂದ ದೇಶದ ಕಾನುನೂ ಸುರಕ್ಷತೆಯ ಮೇಲಾಗುವ ಪರಿಣಾಮದ ಕುರಿತು ಮೆನೊನ್, ಅಲ್ಲಿನ ನಾಯಕರೊದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಮೆನೊನ್ ಅವರೊಂದಿಗೆ ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರೀತಿ ಶರಣ್ ಸಹ ಪ್ರವಾಸ ಕೈಗೊಂಡಿದ್ದಾರೆಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ನವೆಂಬರ್‌ನಲ್ಲಿ ನೇಪಾಳಿನ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೆನೊನ್ ಅವರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮತ್ತಷ್ಟು
ಹೈದಾರಾಬಾದ್ ಸ್ಫೋಟ ರೂವಾರಿ ಭಿಲಾಲ್ ಕೊಲೆ
ಸತ್ತ ಮೇಲೂ ಐವರಿಗೆ ಜೀವದಾನ
ಕೈದಿಗಳ ಬಳಿ ಸೆಲ್‌ಪೋನ್
ಸೇತು: ಪ್ರಮಾಣಪತ್ರ ವಾಪಸ್
10 ಕಳ್ಳರ ಹತ್ಯೆ:ಸಿಐಡಿ ತನಿಖೆ
ಸೇತುಸಮುದ್ರಂ: ಪೂರಕ ಪ್ರಮಾಣಪತ್ರ