ಶೀತಲ ಸಮರದಲ್ಲಿ ತೊಡಗಿರುವ ಬಿಜೆಪಿ ಮತ್ತದರ ಮಿತ್ರ ಪಕ್ಷವಾದ ಶಿವಸೇನಾ, ಕಳೆದ ವಾರ ಮತ್ತೆ ಕೈ ಜೋಡಿಸಿದ್ದು, ಎರಡೂ ಪಕ್ಷಗಳು 2009ರಲ್ಲಿ ನಡೆಯಲಿರುವ ರಾಜ್ಯ ಶಾಸಕಾಂಗ ಚುನಾವಣೆಗಳಲ್ಲಿ ಅಧಿಕಾರಕ್ಕೆ ಬಂದಲ್ಲಿ, ಅಧಿಕಾರ ಹಂಚಿಕೆ ಸೂತ್ರವನ್ನು ಒಳಗೊಂಡಂತೆ ಹಲವಾರು ಕಾರ್ಯತಂತ್ರಗಳನ್ನು ರೂಪಿಸುವ ಸಲುವಾಗಿ ಸದ್ಯದಲ್ಲೇ ಸಭೆ ಸೇರುವ ಸಾಧ್ಯತೆಯಿದೆ.
ಗಣಪತಿ ಹಬ್ಬದ ನಂತರ ನಡೆಯಲಿರುವ ಈ ಸಭೆಯಲ್ಲಿ ಚುನಾವಣೆಯಲ್ಲಿ ಬಹುಮತ ಪಡೆಯುವುದಕ್ಕೆ ಯಾವ ಪಕ್ಷ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಬೇಕು ಎಂಬುವ ಕುರಿತಾಗಿಯೂ ಚರ್ಚಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಯಾವ ಪಕ್ಷ ಬಹುಮತ ಪಡೆಯುತ್ತದೆಯೋ, ಆ ಪಕ್ಷ ಐದು ವರ್ಷಗಳಲ್ಲಿ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಬೇಕು ಹಾಗೂ ಆನಂತರದ ವರ್ಷಗಳಲ್ಲಿ ಇತರ ಪಕ್ಷ ಆ ಹುದ್ದೆಯನ್ನು ಪಡೆಯಬೇಕು ಎಂಬುದು ಬಿಜೆಪಿಯ ಆಲೋಚನೆಯಾಗಿದೆ.
ಆದರೆ, ಶಿವಸೇನಾ ಈ ಪ್ರಸ್ತಾವನೆಗೆ ಸ್ಪಂದಿಸಬೇಕಾಗಿದೆ. ಆದರೂ, ಜಂಟಿಯಾಗಿ ಚುನಾವಣೆಗಳನ್ನು ಎದುರಿಸುವುದೊಂದೆ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಪಡೆಯವುದಕ್ಕೆ ಏಕೈಕ ಮಾರ್ಗವಾಗಿರುವುದರಿಂದ ಎರಡೂ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಒಪ್ಪಿವೆ ಎಂದು ಮೂಲಗಳು ಹೇಳಿವೆ.
ಸೇನಾ ಕಾರ್ಯನಿರ್ವಹಣಾಧ್ಯಕ್ಷ ಉದ್ಧವ್ ಠಾಕ್ರೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ನವದೆಹಲಿಯಲ್ಲಿ ಭೇಟಿಯಾದ ನಂತರ ಬಿಜೆಪಿ ಮತ್ತು ಶಿವಸೇನಾ ಒಂದಾಗಿವೆಯಾದರೂ, ಶಿವಸೇನಾ ಎನ್‌ಸಿಪಿಯೊಂದಿಗೆ ಕೈ ಜೋಡಿಸುವುದು ಅಗತ್ಯವಾಗಿದೆ
ಶಿವಸೇನಾ ಪರ ಪತ್ರಿಕೆ ಸಾಮ್ನಾದಲ್ಲಿ ಬಿಜೆಪಿಯ ಮೇಲಿನ ದಾಳಿಯನ್ನು ನಿಲ್ಲಿಸಿದಲ್ಲಿ ಮಾತ್ರ ಈ ಮೈತ್ರಿ ಶಾಶ್ವತವಾಗುವುದು ಎಂದು ಗೋಪಿನಾಥ್ ಮುಂಡೆ ಮತ್ತು ನಿತಿನ್ ಗಡ್ಕರಿಯವರನ್ನೊಳಗೊಂಡಂತೆ ರಾಜ್ಯದಲ್ಲಿನ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
|