ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮ ಸೇತು ಪ್ರಕರಣದಲ್ಲಿ ಸರಕಾರದ ವಿರುದ್ಧ ಮೋದಿ ವಾಗ್ದಾಳಿ
ರಾಮಸೇತು ವಿಚಾರದಲ್ಲಿ ಕೇಂದ್ರದ ಯುಪಿಎ ಸರಕಾರ ನ್ಯಾಯಾಲಯಕ್ಕೆ ತಪ್ಪು ಪ್ರಮಾಣ ಪತ್ರ ಸಲ್ಲಿಸಿ, ದೇಶದ ಕೋಟ್ಯಾಂತರ ಹಿಂದುಗಳಿಗೆ ದ್ರೋಹ ಬಗೆದಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜಕೋಟ್ ಜಿಲ್ಲೆಯ ಹಲ್ದಾಣಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಮನ ಅಸ್ತಿತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದವರನ್ನು ಜನರು ಮರೆಯುವುದಿಲ್ಲ. ಕಾಂಗ್ರೆಸ್ ನೆತೃತ್ವದ ಸರಕಾರ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದು ಇಂತಹ ಕ್ರಮಗಳನ್ನು ಸಹಿಸುವುದಿಲ್ಲ. ಎಂದು ಹೇಳಿದರು.


ಸರ್ವೋಚ್ಚ ನ್ಯಾಯಾಲಯದಲ್ಲಿ ರಾಮ ಸೇತು ವಿಚಾರಕ್ಕೆ ಸಂಬಂಧಿಸಿದಂತೆ, ಸಲ್ಲಿಸಲಾಗಿದ್ದ ಅಫಿಡವಿಟ್ (ಈಗ ಹಿಂತೆಗೆದುಕೊಳ್ಳಲಾಗಿದೆ) ಕಣ್ತಪ್ಪಿನಿಂದಾಗಿ ಅಗಿರುವ ತಪ್ಪಲ್ಲ. ಹಿಂದುಗಳ ಮನನೋಯಿಸುವ ಉದ್ದೇಶ ಪೂರ್ವಕ ಕ್ರಮ ಎಂದು ಮೋದಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಅಭಿವೃದ್ದಿಗೆ ಅವಶ್ಯಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ವಿರೋಧ ಇಲ್ಲ ಎಂದು ಹೇಳಿದ ಅವರು, ಅಭಿವೃದ್ದಿಯ ಹೆಸರಿನಲ್ಲಿ ದೇಶದ ಸಾಂಪ್ರದಾಯಿಕ ಸ್ಥಳಗಳನ್ನು ನಾಶ ಮಾಡುವುದು ಸರಿಯಲ್ಲ ಎಂದು ಹೇಳಿದರು
ಮತ್ತಷ್ಟು
ಶಿವಸೇನಾದೊಂದಿಗೆ ಸೂತ್ರಕ್ಕೆ ಬಿಜೆಪಿ ಚಿಂತನೆ
ಭಾರತದ ವಿದೇಶಾಂಗ ಕಾರ್ಯದರ್ಶಿಯ ನೇಪಾಳ ಭೇಟಿ
ಹೈದಾರಾಬಾದ್ ಸ್ಫೋಟ ರೂವಾರಿ ಭಿಲಾಲ್ ಕೊಲೆ
ಸತ್ತ ಮೇಲೂ ಐವರಿಗೆ ಜೀವದಾನ
ಕೈದಿಗಳ ಬಳಿ ಸೆಲ್‌ಪೋನ್
ಸೇತು: ಪ್ರಮಾಣಪತ್ರ ವಾಪಸ್