ಮಾಲೆಗಾಂವ್, ಮತ್ತು ಹೈದರಾಬಾದ್ ನಗರಗಳಲ್ಲಿ ಬಾಂಬ್ ಸ್ಪೋಟಿಸಿದ ಇಸ್ಲಾಮಿಕ್ ಉಗ್ರರು ಈಗ ಮಹಾರಾಷ್ಟ್ರದ ಪ್ರಖ್ಯಾತ ಧಾರ್ಮಿಕ ಸ್ಥಳಗಳಾದ ಶಿರಡಿ ಮತ್ತು ತ್ರ್ಯಂಬಕೇಶ್ವರ್ ಮೇಲೆ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ನಾಸಿಕ್ ಜಿಲ್ಲಾ ಪೊಲೀಸ್ ಮೂಲಗಳು ವರದಿ ಮಾಡಿವೆ.
ಶಿರಡಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಸಿಕ ವಲಯದ ವಿಶೇಷ ಐ ಜಿ ಪಿ ಕೆ ಜೈನ್ ಅವರು, ಕೇಂದ್ರಿಯ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಗಳ ಪ್ರಕಾರ ಹಿಂದು ಹಬ್ಬಗಳಾದ ನವರಾತ್ರಿ ಮತ್ತು ದೀಪಾವಳಿಯಲ್ಲಿ ಉಗ್ರರು ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.
ತ್ರ್ಯಂಬಕೇಶ್ವರ ಮತ್ತು ಶಿರಡಿಯಲ್ಲಿ ಇರುವ ವಾಣಿಜ್ಯ ಮಳಿಗೆಗಳು ಉಗ್ರರ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದು, ಆದ್ದರಿಂದ ಸಾರ್ವಜನಿಕರು ಎಚ್ಚರದಿಂದ ಇದ್ದು, ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಶಿರಡಿಯಲ್ಲಿ ಭಕ್ತಾದಿಗಳ ಜನದಟ್ಟಣೆ ಹೆಚ್ಚಾಗಿರುವುದರಿಂದ ಶಿರಡಿಯಲ್ಲಿ ಪೊಲೀಸರು ಬಂದೊಬಸ್ತ ಎರ್ಪಡಿಸಿದ್ದಾರೆ.
|