ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗೆ ಮುನ್ನ ಸಂಸದರನ್ನು ಔತಣ ಕೂಟಕ್ಕೆ ಪ್ರಧಾನಿ ಮನ್ ಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಆಹ್ವಾನಿಸಿದ್ದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಉಭಯ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೆಹಲಿ ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನು ಸದರಿ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಮೂರ್ತಿ ವಿ ಬಿ ಗುಪ್ತಾ ಅವರನ್ನು ಒಳಗೊಂಡ ವಿಚಾರಣಾ ಪೀಠವು ಅರ್ಜಿದಾರನ ಮನವಿಯನ್ನು ತಿರಸ್ಕರಿಸಿ ಮನವಿ ರಾಜಕೀಯ ಪ್ರೇರಿತವಾಗಿದ್ದು ಎಂದು ತೀರ್ಪು ನೀಡಿ ಅರ್ಜಿದಾರನಿಗೆ 25 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದೆ.
ಪ್ರಧಾನಿ ಮತ್ತು ಸೋನಿಯಾ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಮೇಲ್ನೊಟಕ್ಕೆ ಸರಿಯಾದ ಸಾಕ್ಷಿಯನ್ನು ಒದಗಿಸುವಲ್ಲಿ ವಿಫಲನಾಗಿದ್ದು, ವದಂತಿಗಳಿಗೆ ಕಿವಿಗೊಟ್ಟು ಪ್ರಕರಣವನ್ನು ದಾಖಲಿಸಲಾಗಿದೆ. ಒಟ್ಟಿನಲ್ಲಿ ಕಾನೂನು ಅವಹೆಳನ ಮಾಡುವುದಕ್ಕೆ ಸದರಿ ಅರ್ಜಿದಾರ ಮುಂದಾಗಿದ್ದಾನೆ ಎಂದು ನ್ಯಾಯಾಧೀಶ ಗುಪ್ತಾ ನೀಡಿರುವ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಹೈಕೊರ್ಟ್ ನ್ಯಾಯವಾದಿ ರವಿಂದ್ರ ಕುಮಾರ್ ಅವರು, ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟಿನಲ್ಲಿ ದಾವೆ ದಾಖಲು ಮಾಡಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲವು ಪ್ರಧಾನಿ ಮತ್ತು ಉನ್ನತ ನಾಯಕರ ವಿರುದ್ಧ ಸಲ್ಲಿಸಲಾಗಿದ್ದ ವಿಚಾರಣಾ ಮನವಿಯನ್ನು ತಿರಸ್ಕರಿಸಿ, ಕಾನೂನು ಭಂಗ ಮಾಡುವ ಕೆಲಸ ಇವರಿಂದ ಆಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
|