ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹಿಂದಿ ಭಾಷಿಕರ ದಾಳಿಯ ರೂವಾರಿ ಬಂಧನ
ಇತ್ತೀಚೆಗೆ ಹಿಂದಿ ಭಾಷಿಕ ಜನರ ಮೇಲೆ ನಡೆದ ಹಲವಾರು ದಾಳಿಗಳ ಸೂತ್ರಧಾರ, ಉಲ್ಫಾದ ಉನ್ನತ ಉಗ್ರಗಾಮಿ ಪ್ರಬಾಲ್ ನಿಯೋಗ್‌ನನ್ನು ಸೋಮವಾರ ಬಂಧಿಸಲಾಗಿದೆ.

ಅನೇಕ ಹಿಂದಿ ಭಾಷಿಕ ಕಾರ್ಮಿಕರನ್ನು ಹತ್ಯೆ ಮಾಡಿದ ಉಲ್ಫಾದ ಉನ್ನತ ದಾಳಿ ತುಕಡಿಯ ಸ್ವಯಂಘೋಷಿತ ಕಮಾಂಡರ್ ನಿಯೋಗ್‌ನನ್ನು ಅವನ ಪತ್ನಿ, ಮಗುವಿನ ಸಮೇತ ಬಂಧಿಸಲಾಯಿತು ಎಂದು ಅಸ್ಸಾಂ ಸೋನಿತ್‌ಪುರ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನ ಮೇಲ್ಭಾಗದ ಜಿಲ್ಲೆಗಳಲ್ಲಿ ದಾಳಿಗೆ ಮತ್ತು ರಾಜ್ಯದ ಹಿಂದಿ ಭಾಷಿಕ ಜನರ ಹತ್ಯೆಗೆ ತುಕಡಿ ಜವಾಬ್ದಾರಿಯಾಗಿದೆ. ತಿನ್‌ಸುಕಿಯಾ ಮತ್ತು ದಿಬ್ರುಗಢ್‌ನ ಪ್ರಮುಖ ಬಾಂಬ್ ಸ್ಫೋಟಗಳ ಹಿಂದೆ ನಿಯೋಗ್ ಕೈವಾಡವಿತ್ತೆಂದು ಹೇಳಲಾಗಿದೆ.

ನಿಯೋಗ್ ತನ್ನ ಪತ್ನಿ, ಮಗುವಿನ ಜತೆ ಅಸ್ಸಾಂನ ಕರ್ಬಿಯಿಂದ ಅರುಣಾಚಲ ಪ್ರದೇಶದ ಇಟಾನಗರ್‌ಗೆ ಹೊರಟಿದ್ದಾನೆಂಬ ಸುಳಿವಿನ ಆಧಾರದ ಮೇಲೆ ಪೊಲೀಸರು ಸನ್ನಧ್ಧರಾದರು. ತೇಜ್‌ಪುರದ ಮಿಷನ್ ಚಾರಿಯಾಲಿ ಪ್ರದೇಶದಲ್ಲಿ ಅವನು ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದರು.
ಮತ್ತಷ್ಟು
ಜಾತಿ ಬಹಿರಂಗಕ್ಕೆ ಒತ್ತಾಯಿಸುವಂತಿಲ್ಲ
ನಕಲಿ ಚಿನ್ನದ ಪದಕ:ರೈತನಿಗೆ ಆಘಾತ
ಪ್ರಧಾನಿ ವಿಚಾರಣೆ ತಿರಸ್ಕರಿಸಿದ ಹೈಕೋರ್ಟ್
ಉಗ್ರರ ಪಟ್ಟಿಯಲ್ಲಿ ತ್ರ್ಯಂಬಕೇಶ್ವರ, ಶಿರಡಿ
ಲಡಕ್‌ನಲ್ಲಿ ಭಾರತ-ಬ್ರಿಟನ್ ಸಮರಾಭ್ಯಾಸ
ಇಂದು ಮೆನನ್ ಚೀನ ಪ್ರವಾಸ