ದೆಹಲಿ-ಎರ್ನಾಕುಲಂ ಮಂಗಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದೇಶಿ ದಂಪತಿ ಭೋಪಾಲ್ ಬಳಿ ವೇಗವಾಗಿ ಸಾಗುತ್ತಿದ್ದ ರೈಲಿನಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೊದಲು ಮಹಿಳೆ ರೈಲಿನಿಂದ ಹಾರಿದ ಬಳಿಕ ಪುರುಷ ಕೂಡ ಹಾರಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರ ದೇಹಗಳು ರೈಲಿನಡಿ ಸಿಕ್ಕಿ ಛಿದ್ರಛಿದ್ರವಾಗಿದ್ದು, ಪತ್ತೆಯಾದ ಪಾಸ್‌ಪೋರ್ಟ್‌ಗಳು ಕೂಡ ದಂಪತಿಯನ್ನು ಗುರುತಿಸಲಾಗದಷ್ಟು ಹಾನಿಗೊಂಡಿವೆ.
ಅವರ ಸುಪರ್ದಿಯಲ್ಲಿದ್ದ ಗಿಟಾರ್, ಪಾದರಕ್ಷೆಗಳು ಮತ್ತು ಕೆಲವು ಬಟ್ಟೆಗಳನ್ನು ಇಲ್ಲಿಗೆ ತಂದು ದಂಪತಿಯ ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ.
|