ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕ್ಷಿಪ್ರಗತಿಯಲ್ಲಿ ನೌಕಾಯಾನ ಯೋಜನೆ
ತಲ್‌ಬುಲ್ ನೌಕಾಯಾನ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ವಿಷಯದ ಬಗ್ಗೆ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ತಾವು ಪತ್ರ ಬರೆದಿರುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ಪ್ರೊ. ಸೈಫುದ್ದೀನ್ ಸೋಜ್ ಮಂಗಳವಾರ ತಿಳಿಸಿದರು.

ಈ ಯೋಜನೆಯಲ್ಲಿ ಜಪಾನಿನ ಕಂಪನಿಯೊಂದು ಹಣ ಹೂಡಿಕೆಗೆ ಯೋಜಿಸಿದೆ ಎಂದು ಅವರು ತಿಳಿಸಿದರು.ನೌಕಾಯಾನ ಯೋಜನೆಯಿಂದ ಸಿಂಧು ಜಲಒಪ್ಪಂದಕ್ಕೆ ಯಾವುದೇ ತೊಡಕುಂಟಾಗುವುದಿಲ್ಲ ಎಂದು ಹೇಳಿದ ಅವರು, ಜೇಲಮ್ ರಕ್ಷಣೆ ಮತ್ತು ಸೌಂದರ್ಯೀಕರಣಕ್ಕೆ ಎಲ್ಲವನ್ನೂ ಮಾಡುವುದಾಗಿ ಅವರು ಹೇಳಿದರು.

ವುಲ್ಲಾರ್ ಸರೋವರ ಜೇಲಮ್ ನದಿಯನ್ನು ಸಂಪರ್ಕಿಸುವ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಭಾರತ ಪ್ರಕಟಿಸಿದ ಬಳಿಕ, 1884ರಿಂದ ಆ ಪ್ರದೇಶದ ಪರಸ್ಪರ ಹಕ್ಕಿನ ಬಗ್ಗೆ ಉಭಯ ರಾಷ್ಟ್ರಗಳು ಪೈಪೋಟಿಗೆ ಇಳಿದಿದ್ದವು.

ಸಿಂಧು ಜಲ ಒಪ್ಪಂದದಲ್ಲಿ ಉಲ್ಲೇಖಿಸಿರುವ ನದಿ ತೀರದ ಕೆಳಗಿನ ರಾಷ್ಟ್ರವಾದ ಪಾಕಿಸ್ತಾನದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪಾಕ್ ಪ್ರತಿಪಾದಿಸಿದೆ. ಆದರೆ, ಬಾರಾಮುಲ್ಲಾ ಮತ್ತು ವೂಲೂರ್ ನಡುವೆ ನೌಕಾಯಾನದ ಗುರಿಯನ್ನು ಅಣೆಕಟ್ಟು ಹೊಂದಿದ್ದು, ಒಪ್ಪಂದದ ಉಲ್ಲಂಘನೆ ಆಗುವುದಿಲ್ಲ ಎಂದು ಭಾರತ ಹೇಳುತ್ತಿದೆ.

ಅಣೆಕಟ್ಟು ನಿರ್ಮಾಣದಿಂದ ಜೇಲಂ ನದಿ ನೀರು ಪಾಕಿಸ್ತಾನಕ್ಕೆ ಹರಿಯುವುದಕ್ಕೆ ತಡೆ ಉಂಟಾಗಿ ಕೃಷಿ ಆಧಾರಿತ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂದು ಪಾಕಿಸ್ತಾನ ಭೀತಿ ವ್ಯಕ್ತಪಡಿಸಿದೆ.ವುಲಾರ್ ಅಣೆಕಟ್ಟು ಮುಕ್ತಾಯವಾದರೆ, 439 ಅಡಿ ಉದ್ದ ಮತ್ತು 40 ಅಡಿ ಅಗಲವಿದ್ದು, 300,000 ಎಕರೆ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಲಿದೆ.
ಮತ್ತಷ್ಟು
ನಂದಿಗ್ರಾಮ:348 ಮಹಿಳೆಯರ ಮೇಲೆ ದೌರ್ಜನ್ಯ
ರೈಲಿನಿಂದ ಹಾರಿದ ವಿದೇಶಿ ದಂಪತಿ
ಪ್ರಧಾನ ಮಂತ್ರಿಗೆ ಶಸ್ತ್ರಚಿಕಿತ್ಸೆ
ಹಿಂದಿ ಭಾಷಿಕರ ದಾಳಿಯ ರೂವಾರಿ ಬಂಧನ
ಜಾತಿ ಬಹಿರಂಗಕ್ಕೆ ಒತ್ತಾಯಿಸುವಂತಿಲ್ಲ
ನಕಲಿ ಚಿನ್ನದ ಪದಕ:ರೈತನಿಗೆ ಆಘಾತ