ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
"ಏರ್ ಮಿಸ್" ಘಟನೆ ತನಿಖೆ
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಮತ್ತು ವಿರ್ಜಿನ್ ಅಟ್ಲಾಂಟಿಕ್ ವಿಮಾನದ ನಡುವೆ "ಏರ್ ಮಿಸ್" ಘಟನೆಯನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತನಿಖೆ ನಡೆಸಲಿದೆ.

ಅಪಘಾತದ ಸಂಭವಿಸಬಹುದಾಗಿದ್ದ ಘಟನೆಯಲ್ಲವೆಂದು ಅಧಿಕೃತ ಮೂಲಗಳು ಪ್ರತಿಪಾದಿಸಿದರೂ ಕೂಡ ನಿರ್ದಿಷ್ಟ ಎತ್ತರದಲ್ಲಿ ಎರಡು ವಿಮಾನಗಳ ನಡುವೆ ಅಂತರ ಕಾಯ್ದುಕೊಳ್ಳಲು ನಿಗದಿಪಡಿಸಿದ್ದ ನಿಯಮಗಳ ಉಲ್ಲಂಘನೆ ಎಂದು ಹೇಳಿವೆ.

ಆಕಾಶ ಮಧ್ಯೆ ಡಿಕ್ಕಿಯಾಗುವ ಸಂಭವನೀಯತೆ ಇರಲಿಲ್ಲವೆಂದು ಹೇಳಿದ ಮೂಲಗಳು, ಪಂಜಾಬ್ ಮೇಲೆ ಹಾರುತ್ತಿದ್ದ ಎರಡು ವಿಮಾನಗಳು ಸಂಚರಿಸುವ ಮಾರ್ಗದಲ್ಲಿ ಯಾವುದೇ ವಿಮಾನನಿಲ್ದಾಣ ಟಿಸಿಎಎಸ್(ಸಂಚಾರ ಕಟ್ಟೆಚ್ಚರ ಮತ್ತು ಡಿಕ್ಕಿ ತಪ್ಪಿಸುವ ವ್ಯವಸ್ಥೆ) ಎಚ್ಚರಿಕೆ ನೀಡಿಲ್ಲ ಎಂದು ಹೇಳಿವೆ.

ಸೆಪ್ಟೆಂಬರ್ 10ರಂದು ನಡೆದ ಘಟನೆ ಬಗ್ಗೆ ವಿಸ್ತೃತವಾಗಿ ಹೇಳಿದ ಮೂಲಗಳು, ಸೋನಿಯಾ ಐಎಎಫ್‌ನ ಬೋಯಿಂಗ್ 737 ವಿಮಾನದಲ್ಲಿ ರಾಜಧಾನಿಗೆ ಹಿಂತಿರುಗುವಾಗ ಲಂಡನ್‌ನಿಂದ ಬಂದ ವಿರ್ಜಿನ್‌ನ ಏರ್‌ಬಸ್ ಎ-340 ವಿಮಾನ ಸೋನಿಯಾ ಅವರಿದ್ದ ವಿಮಾನಕ್ಕೆ ಅತೀ ಸಮೀಪದಲ್ಲೇ ಹಾದುಹೋಯಿತು.

ಎರಡು ವಿಮಾನಗಳು 2000 ಅಡಿ ವರ್ಟಿಕಲ್ ಅಂತರ ಕಾಯ್ದುಕೊಳ್ಳುವ ಬದಲಿಗೆ 1000 ಅಡಿ ಅಂತರದಲ್ಲಿ ಹಾರಿದಾಗ ಈ ಉಲ್ಲಂಘನೆಯಾಗಿತ್ತು.
ಮತ್ತಷ್ಟು
ಕುಲಾಂತರಿ ಬದನೆ ವಿರುದ್ಧ ಜನಜಾಗೃತಿ
ಕ್ಷಿಪ್ರಗತಿಯಲ್ಲಿ ನೌಕಾಯಾನ ಯೋಜನೆ
ನಂದಿಗ್ರಾಮ:348 ಮಹಿಳೆಯರ ಮೇಲೆ ದೌರ್ಜನ್ಯ
ರೈಲಿನಿಂದ ಹಾರಿದ ವಿದೇಶಿ ದಂಪತಿ
ಪ್ರಧಾನ ಮಂತ್ರಿಗೆ ಶಸ್ತ್ರಚಿಕಿತ್ಸೆ
ಹಿಂದಿ ಭಾಷಿಕರ ದಾಳಿಯ ರೂವಾರಿ ಬಂಧನ