ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಎಂ.ಎಂ. ಜೋಷಿ ಮತ್ತು ಇನ್ನೂ 6 ಜನರ ವಿರುದ್ಧ ಬಾಬರಿ ಮಸೀದಿ ನೆಲಸಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ಕೋರ್ಟ್‌ನಲ್ಲೇ ತಮ್ಮ ವಿಚಾರಣೆ ನಡೆಸಬೇಕೆಂದು ವಿಎಚ್‌ಪಿ ನಾಯಕ ಮತ್ತು ಇನ್ನೂ ಇಬ್ಬರು ಸಲ್ಲಿಸಿದ ಅರ್ಜಿಯ ಬಗ್ಗೆ ಬುಧವಾರ ತೀರ್ಪು ಹೊರಬೀಳಲಿದೆ.
ವಿಎಚ್‌ಪಿ ನಾಯಕ ರಾಮ್ ವಿಲಾಸ್ ವೇದಾಂತಿ ಮತ್ತು ಇನ್ನೂ ಇಬ್ಬರ ವಿರುದ್ಧದ ಪ್ರಕರಣಗಳ ವಿಚಾರಣೆ ಲಕ್ನೊ ಕೋರ್ಟ್‌ನಲ್ಲಿ ಬಾಕಿವುಳಿದಿದೆ. ಆಡ್ವಾಣಿ ಜತೆ ತಮ್ಮ ವಿಚಾರಣೆ ನಡೆಸಲು ಜಿಲ್ಲಾ ಕೋರ್ಟ್‌ಗೆ ಪ್ರಕರಣ ವರ್ಗಾಯಿಸಬೇಕೆಂದು ಅವರು ಕೋರಿದ್ದರು.
ಅಯೋಧ್ಯೆಯಲ್ಲಿ 16ನೇ ಶತಮಾನದ ಮಸೀದಿಯ ನೆಲಸಮದಿಂದ ರಾಷ್ಟ್ರವ್ಯಾಪಿ ಕೋಮು ದಳ್ಳುರಿ ಭುಗಿಲೆದ್ದು, ಅನೇಕ ಜನರ ಜೀವವನ್ನು ಬಲಿತೆಗೆದುಕೊಂಡಿತು. ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕೋಮು ಭಾವನೆ ಕೆರಳಿಸಿದರೆಂಬ ಆರೋಪ ಹೊತ್ತವರಲ್ಲಿ ಆಡ್ವಾಣಿ ಕೂಡ ಒಬ್ಬರು.
|