ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗಗನಯಾನಿ ಸುನಿತಾ ಸ್ವಾಗತಕ್ಕೆ ಸಿದ್ಧತೆ
ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅವರ ಪೂರ್ವಿಕರ ಮನೆಯಿರುವ ಉತ್ತರ ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿರುವ ಜುಲಾಸನ್ ಗ್ರಾಮದ ಜನತೆ ಸುನಿತಾ ಅವರನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಡಿಸ್ಕವರಿ ನೌಕೆಯಲ್ಲಿ ಯಶಸ್ವಿ ಬಾಹ್ಯಾಕಾಶ ಯಾತ್ರೆ ಮುಗಿಸಿದ ಸುನಿತಾ ಗುರುವಾರ ಇಲ್ಲಿಗೆ ಆಗಮಿಸುವರೆಂದು ನಿರೀಕ್ಷಿಸಲಾಗಿದೆ. ಕೇವಲ 5000 ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನರು ತಮ್ಮ ಹಳ್ಳಿಗೆ ಸುನಿತಾ ಕೀರ್ತಿ ತಂದ ಬಗ್ಗೆ ರೋಮಾಂಚಿತರಾಗಿದ್ದಾರೆ.

ಗ್ರಾಮದ ಮಂಡಳಿ ಸುನಿತಾಗೆ ವಿಜೃಂಭಣೆಯ ಸ್ವಾಗತ ನೀಡಲು ಸಿದ್ಧತೆ ನಡೆಸಿದೆ.ಇಡೀ ಗ್ರಾಮವೇ ಸುನಿತಾ ಸ್ವಾಗತಕ್ಕೆ ಎದುರು ನೋಡುತ್ತಿದೆ. ಅವರಿಗೆ ಉಡುಗೊರೆಗಳನ್ನು ನೀಡಲಾಗುವುದು. ಗ್ರಾಮಕ್ಕೆ ಒಂದು ಸುತ್ತು ಬಂದ ಬಳಿಕ ಅವರು ದೇವಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಗ್ರಾಮ ಮಂಡಳಿಯ ಮುಖ್ಯಸ್ಥ ದಿನೇಶ್ ಪಟೇಲ್ ಹೇಳಿದ್ದಾರೆ.

ಸುನಿತಾ ತಂದೆ ದೀಪಕ್ ಪಾಂಡ್ಯ ದೇವಸ್ತಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಮೆರಿಕದ ಜನರು ಸುನಿತಾಳ ಸುರಕ್ಷಿತ ವಾಪಸಾತಿಗೆ ಪ್ರಾರ್ಥನೆ ಸಲ್ಲಿಸಿದ್ದರೂ, ಈ ಗ್ರಾಮ ವೇದದ ಸ್ಥಳವಾಗಿದೆ. ಇಲ್ಲಿ ಸಲ್ಲಿಸುವ ಪ್ರಾರ್ಥನೆ ತಲುಪಿ ಸುನಿತಾ ಸುರಕ್ಷಿತವಾಗಿ ವಾಪಸಾದಳು ಎಂದು ಅವರು ಹೇಳುತ್ತಾರೆ.

ಸುನಿತಾ 1998ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ದುರಂತ ಸಾವಪ್ಪಿದ ಭಾರತೀಯ ಸಂಜಾತೆ ಗಗನಯಾನಿ ಕಲ್ಪನಾ ಚಾವ್ಲಾ ಚಿತಾಭಸ್ಮವನ್ನು ಅವರು ತಂದಿದ್ದರು. ಐದು ದಿನಗಳ ಪ್ರವಾಸದಲ್ಲಿ ಸುನಿತಾ ಮಹಾತ್ಮ ಗಾಂಧಿ ಸಾಬರಮತಿ ಆಶ್ರಮ ಮತ್ತು ಇಸ್ರೋಗೆ ಭೇಟಿ ನೀಡಲಿದ್ದಾರೆ.
ಮತ್ತಷ್ಟು
ಬಾಬ್ರಿ ನೆಲಸಮ:ಇಂದು ವಿಚಾರಣೆ
ಪತ್ರಕರ್ತರಿಂದ ನ್ಯಾಯಾಲಯ ನಿಂದನೆ ಪ್ರಕರಣ
ಬೆಂಬಲ ಹಿಂದೆಗೆತ:ಸಿಪಿಎಂ ಎಚ್ಚರಿಕೆ
"ಏರ್ ಮಿಸ್" ಘಟನೆ ತನಿಖೆ
ಕುಲಾಂತರಿ ಬದನೆ ವಿರುದ್ಧ ಜನಜಾಗೃತಿ
ಕ್ಷಿಪ್ರಗತಿಯಲ್ಲಿ ನೌಕಾಯಾನ ಯೋಜನೆ