ಮುಂಬೈ ಷೇರುಪೇಟೆಯ ಬೆಂಚ್‌ಮಾರ್ಕ್ ಸೂಚ್ಯಂಕ ಬುಧವಾರ ದಾಖಲೆಯ 16,000 ಪಾಯಿಂಟ್‌ಗಳಿಗೆ ಜಿಗಿಯಿತು. ಅಮೆರಿಕ ಫೆಡರಲ್ ರಿಸರ್ವ್ಸ್ ಬಡ್ಡಿ ದರವನ್ನು ಶೇ,0.5ರಷ್ಟು ಕಡಿತ ಮಾಡುವ ನಿರ್ಧಾರದಿಂದ ಉತ್ತೇಜಿತರಾದ ಹೂಡಿಕೆದಾರರ ಷೇರುಗಳ ಖರೀದಿ ಭರಾಟೆಯಿಂದ ಸೂಚ್ಯಂಕ ಹಿಂದೆಂದೂ ಕಾಣದ ದಾಖಲೆಯ ಎತ್ತರಕ್ಕೆ ಜಿಗಿಯಿತು.
ಇದೇ ರೀತಿ ರಾಷ್ಟ್ರೀಯ ಷೇರು ಪೇಟೆಯ ನಿಫ್ಟಿ ಕೂಡ 131.50 ಅಂಶಗಳನ್ನು ಹೆಚ್ಚಿಸಿಕೊಂಡು 4,677.70 ಪಾಯಿಂಟ್‌ಗಳಿಗೆ ಜಿಗಿಯಿತು. ಬಡ್ಡಿದರ ಕಡಿತದಿಂದ ದ್ರವ್ಯತೆ ಸೃಷ್ಟಿಸಿ ಯಾವುದೇ ನಕಾರಾತ್ಮಕ ಪರಿಣಾಮದಿಂದ ವಿತ್ತಪೇಟೆಯನ್ನು ರಕ್ಷಿಸಬಹುದೆಂದು ಹೇಳಲಾಗಿದೆ.
ದ್ರವ್ಯತೆ ಹೆಚ್ಚಳದಿಂದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಹಣ ಹೂಡಿಕೆಯಾಗುವುದೆಂದು ಆಶಿಸಲಾಗಿದೆ.
|