ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮ ಸೇವಕರು ತಮ್ಮ ಬುದ್ದಿ ಪ್ರದರ್ಶಿಸಿದರು: ಕರುಣಾನಿಧಿ
ತಮ್ಮ ಪುತ್ರಿ ಸೆಲ್ವಿಯ ಮನೆಯ ಮೇಲೆ ವಿಎಚ್‌ಪಿ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ತಮಿಳು ನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ರಾಮ ಸೇವಕರು ತಮ್ಮ ಬುದ್ದಿ ಎಷ್ಟಿದೆ ಎಂಬುದನ್ನು ಈ ಕೃತ್ಯದಿಂದ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸೆಲ್ವಿ ಮನೆಯ ಮೇಲೆ ದಾಳಿ ಮಾಡಿ ಹಿಂಸಾಚಾರಕ್ಕೆ ಪ್ರಚೋದಿಸಿದವರ ವಿರುದ್ಧ ಕರ್ನಾಟಕ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿರುವ ಅವರು ಅಲ್ಲಿನ ಸರಕಾರ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಈ ಕೃತ್ಯದಿಂದ ರಾಮಭಕ್ತರು ತಮ್ಮ ಸಂಸ್ಕೃತಿ ಎನು ಎಂಬುದನ್ನು ಸಾಬಿತು ಪಡಿಸಿದ್ದಾರೆ. ರಾಮನ ಕುರಿತು ನನ್ನ ಅಭಿಪ್ರಾಯದಲ್ಲಿ ಯಾವ ತಪ್ಪಿದೆ. ಸೇತು ಸಮುದ್ರಂ ಯೋಜನೆಯನ್ನು ವಿರೋಧಿಸುತ್ತಿರುವವರು ಸಣ್ಣ ಸಣ್ಣ ಕಾರಣಗಳನ್ನು ಏತ್ತಿ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕರುಣಾನಿಧಿ ಪುತ್ರಿ ಸೆಲ್ವಿ ಮನೆ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿರುವ ಕರ್ನಾಟಕದ ಗೃಹ ಸಚಿವ ಎಂ ಪಿ ಪ್ರಕಾಶ ಅವರು "ಇದೊಂದು ಹೀನ ಕೃತ್ಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪಕ್ಕಾ ನಾಸ್ತಿಕವಾದಿಯಾಗಿರುವ ಕರುಣಾನಿಧಿ ಅವರು ರಾಮ ಎನ್ನುವ ವ್ಯಕ್ತಿ ಭಾರತದಲ್ಲಿ ಇರಲಿಲ್ಲ ರಾಮನ ವ್ಯಕ್ತಿತ್ವ ಒಂದು ಕಲ್ಪನೆ. ರಾಮನು ಒರ್ವ ಸಿವಿಲ್ ಇಂಜಿನಿಯರ್ ಆಗಿದ್ದನೆ ಎಂದು ಹೇಳಿದ್ದಾರೆ.
ಮತ್ತಷ್ಟು
ಷೇರು ಸೂಚ್ಯಂಕ ದಾಖಲೆಯ ಜಿಗಿತ
ಗಗನಯಾನಿ ಸುನಿತಾ ಸ್ವಾಗತಕ್ಕೆ ಸಿದ್ಧತೆ
ಬಾಬ್ರಿ ನೆಲಸಮ:ಇಂದು ವಿಚಾರಣೆ
ಪತ್ರಕರ್ತರಿಂದ ನ್ಯಾಯಾಲಯ ನಿಂದನೆ ಪ್ರಕರಣ
ಬೆಂಬಲ ಹಿಂದೆಗೆತ:ಸಿಪಿಎಂ ಎಚ್ಚರಿಕೆ
"ಏರ್ ಮಿಸ್" ಘಟನೆ ತನಿಖೆ