ಕಾಂಗ್ರೆಸ್ ಸಂಸತ್ ಸದಸ್ಯ ರಾಹುಲ್ ಗಾಂಧಿ ಅವರು ಸ್ವಕ್ಷೇತ್ರ ಅಮೇಥಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅಮೇಥಿ ಗ್ರಾಮ ಕಾಂಗ್ರೆಸ್ ಯೋಜನೆ ಮತ್ತಿತರ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಅಮೇಥಿ ಗ್ರಾಮ ಕಾಂಗ್ರೆಸ್ ಯೋಜನೆಯನ್ನು 16 ಅಭಿವೃದ್ಧಿ ಬ್ಲಾಕ್‌ಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ.
ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರನ್ನು ಕೂಡ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಕ್ಕೆ ರಾಹುಲ್ ಮಹತ್ವ ನೀಡಿದ್ದಾರೆ. ಪ್ರತಿ 50 ಕುಟುಂಬಗಳಲ್ಲಿ ಒಬ್ಬ ಕಾರ್ಯಕರ್ತನನ್ನು ಈ ಯೋಜನೆಗೆ ನೇಮಕ ಮಾಡಿಕೊಳ್ಳಲಾಗುವುದು.
16 ಅಭಿವೃದ್ಧಿ ಬ್ಲಾಕ್‌ಗಳಿಗೆ 8000 ಕಾರ್ಮಿಕರನ್ನು ನೇಮಿಸಿಕೊಂಡು ಅವರಿಗೆ ದೆಹಲಿಯಲ್ಲಿ ವಿಶೇಷ ತರಬೇತಿ ನೀಡಲಾಗುವುದು.ರಾಹುಲ್ ಮಂಗಳವಾರ ಥಾಕುರ್‌ಗಂಜ್, ರಾಣಿಗಂಜ್ ಮತ್ತು ಗುನ್ನಾರ್‌ನ ಹಾಲು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದರು.
ಕ್ಷೇತ್ರದಲ್ಲಿ ಸಹಕಾರಿತಾ ಪ್ರಯಾಸ್ ಯೋಜನೆಯನ್ನು ಆರಂಭಿಸಿದ್ದು, ಹಾಲು ಕೆಡದಂತೆ ಹಲವಾರು ಶೀತಲೀಕರಣ ಘಟಕಗಳನ್ನು ನಿರ್ಮಿಸಲಾಗುವುದು.
|