ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಾಶ್ಮೀರದಲ್ಲಿ ಯುದ್ಧವಿರಾಮವಿಲ್ಲ: ಆಂಟೊನಿ
ರಮ್ಜಾನ್ ಪವಿತ್ರ ತಿಂಗಳಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಏಕಪಕ್ಷೀಯವಾಗಿ ಯುದ್ಧವಿರಾಮ ಘೋಷಿಸುವುದಿಲ್ಲ ಎಂದು ಸರ್ಕಾರ ಬುಧವಾರ ತಿಳಿಸಿದೆ. ನಾವು ಯುದ್ಧವಿರಾಮವನ್ನು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ.

ಅದು ಭಯೋತ್ಪಾದಕರನ್ನು ಕೂಡ ಅವಲಂಬಿಸಿದೆ ಎಂದು ಕರಾವಳಿ ಕಾವಲುಪಡೆ ಕಮಾಂಡರ್‌ಗಳ ಸಮಾವೇಶದ ನೇಪಥ್ಯದಲ್ಲಿ ಮಾತನಾಡುತ್ತಾ ರಕ್ಷಣಾ ಸಚಿವ ಎ.ಕೆ. ಆಂಟೋನಿ ಹೇಳಿದರು.

ರಮ್ಜಾನ್ ತಿಂಗಳಿನಲ್ಲಿ ಉಗ್ರಗಾಮಿಪೀಡಿತ ರಾಜ್ಯದಲ್ಲಿ ಭಯೋತ್ಪಾದಕ ಗುಂಪುಗಳ ಜತೆ ಒಪ್ಪಂದಕ್ಕೆ ಬರಲು ಸರ್ಕಾರ ಯೋಜಿಸಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಕೆಲವು ರಾಜಕೀಯ ಪಕ್ಷಗಳು ಯುದ್ಧವಿರಾಮ ಘೋಷಿಸುವಂತೆ ಕೇಂದ್ರಸರ್ಕಾರವನ್ನು ಕೋರಿದೆ. ಆದರೆ ಭದ್ರತಾ ಪಡೆಗಳು ಈ ಕ್ರಮವನ್ನು ವಿರೋಧಿಸಿವೆ. ಮುಂಚಿನ ಅವಧಿಯಲ್ಲಿ ಯುದ್ಧವಿರಾಮ ಘೋಷಿಸಿದಾಗ ಭಯೋತ್ಪಾದಕರು ಪುನರ್‌ಸಂಘಟನೆಗೆ ಇದನ್ನು ಬಳಸಿಕೊಂಡರೆಂದು ಅವು ಕಾರಣ ನೀಡಿದವೆಂದು ಅಧಿಕೃತ ಮೂಲಗಳು ಹೇಳಿವೆ.

ಉಗ್ರಗಾಮಿಗಳು ಪ್ರಸಕ್ತ ಭದ್ರತಾ ಪಡೆಗಳ ಕಾವನ್ನು ಎದುರಿಸುತ್ತಿದ್ದು, ಅವರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ. ಜಮ್ಮು ಕಾಶ್ಮೀರದ ಮುಂಚೂಣಿ ಪ್ರದೇಶಗಳಲ್ಲಿ ಯುದ್ಧವಿರಾಮ ಕುರಿತಂತೆ, ಇದು ಉಭಯ ರಾಷ್ಟ್ರಗಳ ನಡುವೆ ಯುದ್ಧವಿರಾಮವಾಗಿದ್ದು, ಕಳೆದ ಮೂರು ವರ್ಷಗಳಿಂದ ಉತ್ತಮ ಫಲಶ್ರುತಿ ಬಂದಿದೆ ಎಂದು ಹೇಳಿದರು.
ಮತ್ತಷ್ಟು
ರಾಹುಲ್ ಅಮೇಥಿ ಪ್ರವಾಸ
ರಾಮ ಸೇವಕರು ತಮ್ಮ ಬುದ್ದಿ ಪ್ರದರ್ಶಿಸಿದರು: ಕರುಣಾನಿಧಿ
ಷೇರು ಸೂಚ್ಯಂಕ ದಾಖಲೆಯ ಜಿಗಿತ
ಗಗನಯಾನಿ ಸುನಿತಾ ಸ್ವಾಗತಕ್ಕೆ ಸಿದ್ಧತೆ
ಬಾಬ್ರಿ ನೆಲಸಮ:ಇಂದು ವಿಚಾರಣೆ
ಪತ್ರಕರ್ತರಿಂದ ನ್ಯಾಯಾಲಯ ನಿಂದನೆ ಪ್ರಕರಣ