ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸರ್ಕಾರದ ಪ್ರತಿಕ್ರಿಯೆಗೆ ಎಡಪಕ್ಷಗಳ ನಕಾರ
PTI
ಪರಮಾಣು ಸಹಕಾರ ಒಪ್ಪಂದದ ಬಗ್ಗೆ ತಮ್ಮ ಆಕ್ಷೇಪಗಳಿಗೆ ಸರ್ಕಾರ ನೀಡಿರುವ ಪ್ರತಿಕ್ರಿಯೆಯನ್ನು ಎಡಪಕ್ಷಗಳು ಬುಧವಾರ ನಿರಾಕರಿಸಿವೆ. ಸರ್ಕಾರದ ಒಂದು ವಾದ ಕೂಡ ನಮಗೆ ಮನದಟ್ಟಾಗಿಲ್ಲ. ಅವೆಲ್ಲ ವಕೀಲರ ವಾದ ಎಂದು ಎಡಪಕ್ಷಗಳ ಜತೆ 90 ನಿಮಿಷಗಳ ಮಾತುಕತೆ ಬಳಿಕ ಸಿಪಿಐ ನಾಯಕ ಎ.ಬಿ. ಬರ್ಧನ್ ವರದಿಗಾರರಿಗೆ ತಿಳಿಸಿದರು.

123 ಒಪ್ಪಂದದ ಬಗ್ಗೆ ಸರ್ಕಾರದ ವಾದಕ್ಕೆ ಎಡಪಕ್ಷಗಳು ಒಪ್ಪಿವೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಸರ್ಕಾರದ ಪ್ರತಿಕ್ರಿಯೆಗೆ ಒಂದು ರೀತಿಯ ಉತ್ತರವನ್ನು ಸಿದ್ಧಪಡಿಸಿದ್ದು, ಅದರ ಆಧಾರದ ಮೇಲೆ ನಾವು ಚರ್ಚಿಸುತ್ತೇವೆ ಎಂದು ಸಿಪಿಐ ನಾಯಕ ಹೇಳಿದರು.

ವಿಯೆನ್ನಾದಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಪ್ರತಿಕ್ರಿಯೆಗೆ ಉತ್ತರಿಸಿದ ಬರ್ಧನ್ ಕಾಕೋಡ್ಕರ್ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ. ಭಾರತದ ನಿರ್ದಿಷ್ಟ ಸುರಕ್ಷತೆಗಳ ಬಗ್ಗೆ ಅವರು ಮಾತನಾಡಿಲ್ಲ ಎಂದು ಹೇಳಿದರು.
ಮತ್ತಷ್ಟು
ಕಾಶ್ಮೀರದಲ್ಲಿ ಯುದ್ಧವಿರಾಮವಿಲ್ಲ: ಆಂಟೊನಿ
ರಾಹುಲ್ ಅಮೇಥಿ ಪ್ರವಾಸ
ರಾಮ ಸೇವಕರು ತಮ್ಮ ಬುದ್ದಿ ಪ್ರದರ್ಶಿಸಿದರು: ಕರುಣಾನಿಧಿ
ಷೇರು ಸೂಚ್ಯಂಕ ದಾಖಲೆಯ ಜಿಗಿತ
ಗಗನಯಾನಿ ಸುನಿತಾ ಸ್ವಾಗತಕ್ಕೆ ಸಿದ್ಧತೆ
ಬಾಬ್ರಿ ನೆಲಸಮ:ಇಂದು ವಿಚಾರಣೆ