ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಯುಪಿಎ ಕ್ಷಮೆ ಕೇಳಲು ಆಡ್ವಾಣಿ ಆಗ್ರಹ
ಭಗವಾನ್ ರಾಮನ ಅಸ್ತಿತ್ವ ಪ್ರಶ್ನಿಸಿ ಸುಪ್ರೀಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕೆ ಸರ್ಕಾರವನ್ನು ಹೊಣೆ ಮಾಡಿದ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ, ಯುಪಿಎ ಕ್ಷಮಾಪಣೆ ಕೇಳುವ ತನಕ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.

ನೌಕಾಯಾನ ಮಾರ್ಗ ಮೊಟಕುಗೊಳಿಸಲು ಸೇತುಸಮುದ್ರಂ ನೌಕಾ ಕಾಲುವೆ ಯೋಜನೆಯನ್ನು ಸಮರ್ಥಿಸಿಕೊಂಡ ಸರ್ಕಾರ ಕಳೆದ ವಾರ ಹಿಂದು ಮಹಾಗ್ರಂಥಗಳು ರಾಮನ ಅಸ್ತಿತ್ವವನ್ನು ರುಜುವಾತು ಮಾಡುವ ಐತಿಹಾಸಿಕ ದಾಖಲೆಗಳಲ್ಲ ಎಂದು ತಿಳಿಸಿತ್ತು.

ರಾಮಜನ್ಮಭೂಮಿ ಆಂದೋಳನದ ಸಂದರ್ಭದಲ್ಲಿ ಯಾರೂ ರಾಮನ ಅಸ್ತಿತ್ವದ ಬಗ್ಗೆ ಅನುಮಾನ ಮೂಡಿಸಲಿಲ್ಲ ಎಂದು ಗಮನಸೆಳೆದ ಆಡ್ವಾಣಿ, ಈಗ ರಾಮನ ಕಥೆ ಕಾಲ್ಪನಿಕ ಎಂದು ಸರ್ಕಾರ ಹೇಳುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹೇಳಿದರು.

ರಾಮ ರಾಜ್ಯದ ಬಗ್ಗೆ ಕಾಂಗ್ರೆಸ್ ಸರ್ಕಾರ ಸದಾ ಮಾತನಾಡುತ್ತಿತ್ತು. ಈಗ ಗಾಂಧಿ ಸಮಾಧಿಯಿಂದ 'ಹೆ ರಾಮ್' ಪದಗಳನ್ನು ತೆಗೆಯುತ್ತೀರಾ ಎಂದು ಪ್ರಶ್ನಿಸಿದರು.ಸಂಸತ್ ಚುನಾವಣೆ ಯಾವುದೇ ಸಂದರ್ಭದಲ್ಲಿ ನಡೆಯಬಹುದು ಎಂದು ಹೇಳಿದ ಅವರು ಅದಕ್ಕೆ ಸಿದ್ಧರಾಗಿರುವಂತೆ ತಿಳಿಸಿದರು.

ಆದರೆ ವಿವಾದಾತ್ಮಕ ಕಾಲುವೆ ಯೋಜನೆಯ ಸ್ಥಗಿತಕ್ಕೆ ಬಿಜೆಪಿ ಕೋರಿಲ್ಲ. ರಾಮೇಶ್ವರ ತೀರದಿಂದ ಶ್ರೀಲಂಕಾದ ಮನ್ನಾರ್ ತೀರದವರೆಗೆ ಕಡಿಮೆ ದೂರದ ನೌಕಾಯಾನ ಮಾರ್ಗ ನಿರ್ಮಾಣದ ಸಲುವಾಗಿ ದಿಬ್ಬವನ್ನು ಒಡೆಯುವುದು ಯೋಜನೆಯಲ್ಲಿ ಸೇರಿದೆ.

ಪಕ್ಷದ ಸಭೆ ನಿರ್ಣಯವನ್ನು ಅನುಮೋದಿಸಿ, ಸೇತುಸಮುದ್ರಂ ನೌಕಾ ಕಾಲುವೆ ಯೋಜನೆಯನ್ನು ಕಾಲುವೆಯ ಮಾರ್ಗ ಬದಲಿಸುವ ಮೂಲಕ ಮುಗಿಸಬೇಕೇ ಹೊರತು ರಾಮಸೇತು ಅಥವಾ ಅಡಾಮ್ಸ್ ಬ್ರಿಜ್ ಒಡೆಯುವ ಮೂಲಕವಲ್ಲ ಎಂದು ಹೇಳಿದೆ.

ಸೇತುಸಮುದ್ರಂ ನೌಕಾ ಕಾಲುವೆ ನಿರ್ಮಿಸುವುದರ ಬದಲಿಗೆ ರಾಮಸೇತು ನಾಶಕ್ಕೆ ತಮಿಳುನಾಡಿನ ಕೆಲವು ನಾಯಕರು ಆಸಕ್ತರಾಗಿದ್ದಾರೆ ಎಂದು ಆಡ್ವಾಣಿ ಹೇಳಿದ್ದಾರೆ.

ಮತ್ತಷ್ಟು
ಪಂಧೇರ್ ವಿರುದ್ಧ ದೋಷಾರೋಪ
ಸರ್ಕಾರದ ಪ್ರತಿಕ್ರಿಯೆಗೆ ಎಡಪಕ್ಷಗಳ ನಕಾರ
ಕಾಶ್ಮೀರದಲ್ಲಿ ಯುದ್ಧವಿರಾಮವಿಲ್ಲ: ಆಂಟೊನಿ
ರಾಹುಲ್ ಅಮೇಥಿ ಪ್ರವಾಸ
ರಾಮ ಸೇವಕರು ತಮ್ಮ ಬುದ್ದಿ ಪ್ರದರ್ಶಿಸಿದರು: ಕರುಣಾನಿಧಿ
ಷೇರು ಸೂಚ್ಯಂಕ ದಾಖಲೆಯ ಜಿಗಿತ