ಅಮೆರಿಕ, ಫ್ರಾನ್ಸ್ ಮತ್ತು ಆಸ್ಟ್ರೇಲಿಯದ ವಿದೇಶಿಯರು ಸೇರಿದಂತೆ ಸುಮಾರು 15 ಯಾತ್ರೆಗಳು ಸಿಯಾಚಿನ್ ಗ್ಲೇಸಿಯರ್ ಶೃಂಗಕ್ಕೆ ಈಗಾಗಲೇ ಏರಿದ್ದು, ನಾಗರಿಕರಿಗೆ ಸಿಯಾಚಿನ್ ಪ್ರದೇಶ ಈಗಾಗಲೇ ಆರೋಹಣಕ್ಕೆ ಮುಕ್ತವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಿಯಾಚಿನ್ ಪ್ರದೇಶ ಕೆಲವು ಸಮಯದಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದು, 72 ಕಿಮೀ ನೀರ್ಗಲ್ಲು ಬೆಟ್ಟಗಳನ್ನು ಅಮೆರಿಕ, ಫ್ರಾನ್ಸ್ ಮತ್ತು ಆಸ್ಟ್ರೇಲಿಯದ ಮೂರು ತಂಡಗಳು ಏರಿವೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟೊನಿ ಗುರುವಾರ ತಿಳಿಸಿದರು.
ಕರಾವಳಿ ಕಾವಲುಪಡೆ ಕಮಾಂಡರ್‌ಗಳ ಸಮಾವೇಶದ ನೇಪಥ್ಯದಲ್ಲಿ ವರದಿಗಾರರ ಜತೆ ಅವರು ಮಾತನಾಡುತ್ತಿದ್ದರು. ಪಾಕಿಸ್ತಾನವು ಕುಮಾರ್ ಪೋಸ್ಟ್ ಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದರೂ. ರಕ್ಷಣಾ ಸಚಿವಾಲಯ ಬುಧವಾರ ಅದಕ್ಕೆ ಅನುಮತಿ ನೀಡಿತು.
ಭಾರತೀಯ ಪರ್ವತಾರೋಹಿ ಪ್ರತಿಷ್ಠಾನದ ಅಂಕಿಅಂಶಗಳ ರೀತ್ಯ ಪಾಕಿಸ್ತಾನ ಪಡೆಗಳ ಜತೆ ಹೋರಾಟ ಮಾಡಿದ ಎತ್ತರಕ್ಕೆ ಕೂಡ ಯಾತ್ರೆಗಳು ಮತ್ತು ಟ್ರೆಕಿಂಗ್ ತಂಡ ಹೋಗಿವೆ. ಅಮೆರಿಕದ ತಂಡಗಳು ಎರಡು ಬಾರಿ ಸಿಯಾಚಿನ್ ಬೆಟ್ಟವನ್ನು ಏರಿದೆ.
2000ದಿಂದ 2007ರ ನಡುವೆ ಫ್ರಾನ್ಸ್, ಇಟಲಿ ಮತ್ತು ಬ್ರಿಟನ್ ತಂಡಗಳು ಸಿಯಾಚಿನ್ ನೀರ್ಗಲ್ಲು ಬೆಟ್ಟವನ್ನು ಏರಿವೆ ಎಂದು ಅಂಕಿಅಂಶಗಳು ತೋರಿಸಿವೆ.
|