ರೈಲ್ವೆ ಟಿಕೆಟ್ ಮಾರಾಟದ ಕೌಂಟರ್‌ಗಳ ಎದುರು ಟಿಕೆಟ್ ಖರೀದಿಗೆ ಉದ್ದನೆಯ ಸಾಲು ಇನ್ನು ಮೇಲೆ ಗತನೆನಪಾಗಬಹುದು. ರಾಷ್ಟ್ರಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ 6,344 ಸ್ವಯಂಚಾಲಿತ ಟಿಕೆಟ್ ಮಾರಾಟದ ಯಂತ್ರಗಳನ್ನು ನಿರ್ಮಿಸುವ ರೈಲ್ವೆ ಇಲಾಖೆಯ ಯೋಜನೆ ಫಲಿಸಿದರೆ ಇದು ಸಾಧ್ಯವಾಗುತ್ತದೆ.
ಸ್ಥಳೀಯ ಅಥವಾ ದೂರ ಪ್ರಯಾಣದ ರೈಲಾಗಿರಲಿ, ಟಿಕೆಟ್ ಕೌಂಟರ್‌ಗಳ ಎದುರು ಜನದಟ್ಟಣೆ ಮಾಮೂಲಿ ದೃಶ್ಯವಾಗಿದೆ. ಕಾಯ್ದಿರಿಸಿರದ ಟಿಕೆಟ್‌ಗಳನ್ನು ಪಡೆಯಲು ಉದ್ದನೆಯ ಸಾಲು ಗರಿಷ್ಠ ಮಟ್ಟದಲ್ಲಿರುತ್ತದೆ. ಟಿಕೆಟ್ ಕೌಂಟರ್‌ಗಳಲ್ಲಿ ರಷ್ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಎಂದು ರೈಲ್ವೆಯ ಹಿರಿಯ ಅಧಿಕಾರಿ ತಿಳಿಸಿದರು.
ಎಟಿವಿಎಂನಲ್ಲಿ ಸ್ಪರ್ಶಿಸುವ ಸ್ಕ್ರೀನ್ ವ್ಯವಸ್ಥೆ ಇದ್ದು ಪ್ರಯಾಣಿಕ ತಾನು ತಲುಪುವ ಸ್ಥಳ, ಖರೀದಿಸುವ ಟಿಕೆಟ್‌ಗಳ ಸಂಖ್ಯೆ, ವಯಸ್ಕರು ಅಥವಾ ಮಕ್ಕಳ ಸಂಖ್ಯೆಯ ಮಾಹಿತಿ ನಮೂದಿಸಬೇಕು. ಸ್ಮಾರ್ಟ್ ಕಾರ್ಡ್ ಬಳಸುವ ಮೂಲಕ ಪ್ರಯಾಣಿಕನಿಗೆ ಕರೆನ್ಸಿ ನೋಟುಗಳನ್ನು ಬಳಸುವ ಅವಕಾಶವಿರುತ್ತದೆ.
ನಿಖರ ದರವನ್ನು ಹಿಡಿದುಕೊಂಡು ಮಾರಾಟದ ಯಂತ್ರ ಬಾಕಿ ಹಣ ಹಿಂತಿರುಗಿಸುತ್ತದೆ ಎಂದು ಅಧಿಕಾರಿ ತಿಳಿಸಿದರು.ಪ್ರತಿ ದಿನ ಮೇಲ್, ಎಕ್ಸ್‌ಪ್ರೆಸ್ ಮತ್ತು ಸ್ಥಳೀಯ ರೈಲುಗಳಲ್ಲಿ ಒಂದು ಕೋಟಿ ಜನರು ಪ್ರಯಾಣಿಸುತ್ತಾರೆ. ಅವುಗಳಲ್ಲಿ ಕೇವಲ 7.5 ಲಕ್ಷ ಕಾಯ್ದಿರಿಸಿದ ಟಿಕೆಟ್‌ಗಳನ್ನು ಮಾರಲಾಗುತ್ತದೆ ಎಂದು ಹೇಳಿದರು.
ಸ್ವಯಂಚಾಲಿತ ಯಂತ್ರಗಳು ಯುರೋಪ್‌ನ ಅನೇಕ ರಾಷ್ಟ್ರಗಳು, ಅಮೆರಿಕ ಮತ್ತು ಸಿಂಗಪುರ್‌ನಲ್ಲಿ ಕಾರ್ಯಗತವಾಗಿದೆ. ಒಂದು ಯಂತ್ರ ಅಳವಡಿಕೆಗೆ 1.5 ಲಕ್ಷ ರೂ.ವೆಚ್ಚವಾಗುತ್ತದೆ. ಮೊದಲ ಹಂತವಾಗಿ 300 ಎಟಿವಿಎಂಗಳನ್ನು ಮುಂಬೈನಲ್ಲಿ ಅಳವಡಿಸುತ್ತೇವೆ. ಬಳಿಕ ರಾಷ್ಟ್ರದ ವಿವಿಧ ಭಾಗಗಳಿಗೆ ಈ ಯೋಜನೆ ವಿಸ್ತರಿಸುತ್ತೇವೆ.
ಎರಡು ವರ್ಷಗಳಲ್ಲಿ ಅಳವಡಿಕೆ ಮುಗಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು. ಎಟಿವಿಎಂಗಳ ಅಳವಡಿಕೆ ಜತೆ ಕಾಯ್ದಿರಿಸಲಾಗದ ಬೋಗಿಗಳ ಸಂಖ್ಯೆಯನ್ನು 2ರಿಂದ 6ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
|