ಕೋಡಂಬಾಕಂ ಪ್ರದೇಶದ ಮಾಜಿ ಶಾಸಕರೊಬ್ಬರ ನಿವಾಸದಲ್ಲಿ ನಿಗೂಢ ಮಹಿಳೆಯೊಬ್ಬಳು 100 ಸವರನ್ ಚಿನ್ನಾಭರಣ ಮತ್ತು ಒಂದು ಲಕ್ಷ ರೂ. ದರೋಡೆ ಮಾಡಿದ ಘಟನೆ ನಡೆದಿದೆ. ಪಿಎಂಕೆಯ ಮಾಜಿ ಶಾಸಕ ಉಲಗರಚಗನ್ ನಿವಾಸದಲ್ಲಿ ನಡೆದ ಘಟನೆಯಿಂದ ಈ ಪ್ರದೇಶದಲ್ಲಿ ತಲ್ಲಣ ಮೂಡಿಸಿದೆ.
ಮಾಜಿ ಶಾಸಕರ ಪತ್ನಿ ಅಂಬಿಕಾ ಮನೆಯಲ್ಲಿ ಒಂಟಿಯಾಗಿದ್ದಾಗ ಅಜ್ಞಾತ ಮಹಿಳೆಯೊಬ್ಬಳು ಏಕಾಏಕಿ ಒಳನುಗ್ಗಿ ಅವರ ಬಾಯಿಗೆ ಬಟ್ಟೆ ತುರುಕಿದ್ದಲ್ಲದೇ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾದಳು.
ಕರೆಗಂಟೆ ಬಾರಿಸಿದಾಗ ಅಂಬಿಕಾ ಬಾಗಿಲು ತೆರೆದಕೂಡಲೇ ಅಪರಿಚಿತ ಮಹಿಳೆ ಒಳನುಗ್ಗಿ ಒಳಗಿನಿಂದ ಚಿಲಕ ಹಾಕಿದಳೆಂದು ಹೇಳಲಾಗಿದೆ. ಎಲ್ಲವೂ ಕೆಲವೇ ಕ್ಷಣಗಳಲ್ಲಿ ನಡೆದುಹೋಯಿತೆಂದು ಅಂಬಿಕಾ ಹೇಳಿದ್ದಾರೆ.
ಅವರು ಕೂಗಿಕೊಂಡಿದ್ದು ಕೇಳಿ ನೆರೆಮನೆಯವರು ಬರುವಷ್ಟರಲ್ಲಿ ಅಪರಿಚಿತ ಮಹಿಳೆ ಪರಾರಿಯಾದಳೆಂದು ಹೇಳಲಾಗಿದೆ. ನಿಗೂಢ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.
|