ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮೆಮರಿ ಚಾಂಪಿಯನ್ ನಿಶ್ಚಾಲ್
12 ವರ್ಷ ವಯಸ್ಸಿನ ಈ ಪ್ರತಿಭಾವಂತ ಬಾಲಕ ನಿಶ್ಚಾಲ್ ತನ್ನ ಹೆಸರಿನಲ್ಲಿ ಗಿನ್ನೆಸ್ ದಾಖಲೆ ಈಗಾಗಲೇ ಹೊಂದಿದ್ದಾನೆ. ಈಗ ಬಹರೇನ್‌ನಲ್ಲಿ ಮಕ್ಕಳ ವಿಭಾಗದ ವಿಶ್ವ ಮೆಮರಿ ಚಾಂಪಿಯನ್‌ಶಿಪ್‌ನಲ್ಲಿ ವಿಜೇತನಾಗಿ ತನ್ನ ಮುಡಿಗೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದ್ದಾನೆ.

ನಿಶ್ಚಾಲ್ ಆ.31ರಿಂದ ಸೆ.2ರವರೆಗೆ ನಡೆದ ಚಾಂಪಿಯನ್‌ಶಿಪ್‌ನಲ್ಲಿ 10 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ. 80 ರಾಷ್ಟ್ರಗಳಿಗೆ ಸೇರಿದ 50 ಮಕ್ಕಳು ಸ್ಮರಣೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಮಕ್ಕಳು, ಜೂನಿಯರ್, ಸೀನಿಯರ್ ಪಾಲ್ಗೊಂಡಿದ್ದ ಮನಸೋಇಚ್ಛೆ ವಸ್ತುಗಳನ್ನು ಸ್ಮರಣೆಗೆ ತಂದುಕೊಳ್ಳುವ ಡಬ್ಲ್ಯುಎಂಸಿ 2007 ಸ್ಪರ್ಧೆಯಲ್ಲಿ ನಿಶ್ಚಾಲ್‌ 27ನೇ ಸ್ಥಾನ ಗಳಿಸಿದ. 478 ವಿಶ್ವದ ಉನ್ನತ ಸ್ಮರಣೆಗಾರರಲ್ಲಿ ಅವನ ಸ್ಥಾನ 157.

ನಿಶ್ಚಾಲ್ ಸಾಧನೆ ಅಷ್ಟಕ್ಕೆ ಮುಗಿದಿಲ್ಲ. ಗಣಿತದಲ್ಲಿ 6 ಪುಸ್ತಕಗಳ ಲೇಖಕನಾಗಿ ಅತ್ಯಂತ ಕಿರಿಯ ಕೃತಿಕಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲಪ್ರತಿಭೆ ನಿಶ್ಚಾಲ್‌ ನಗರದಲ್ಲಿ ಸ್ಮರಣೆ ಸಂಸ್ಥೆ ಸ್ಥಾಪಿಸುವ ಹೆಬ್ಬಯಕೆ ಹೊಂದಿದ್ದಾನೆ.
ಮತ್ತಷ್ಟು
ರಾಮ ಸುಳ್ಳುಗಾರನಾಗಿದ್ದ: ಕರುಣಾನಿಧಿ
ಮಹಿಳೆಯಿಂದ ಚಿನ್ನಾಭರಣ ದರೋಡೆ
ರೈಲ್ವೆ ನಿಲ್ದಾಣಗಳಲ್ಲಿ ಎಟಿಎಂ ಸೌಲಭ್ಯ
ಸಿಯಾಚಿನ್‌ ಆರೋಹಣಕ್ಕೆ ಮುಕ್ತ
ಲೈವ್ ಇಂಡಿಯ ಚಾನೆಲ್‌ ನಿಷೇಧ ಸಂಭವ
ಯುಪಿಎ ಕ್ಷಮೆ ಕೇಳಲು ಆಡ್ವಾಣಿ ಆಗ್ರಹ