ಹಿಮಾಚಲಪ್ರದೇಶದಲ್ಲಿರುವ ಮಾದಕವಸ್ತು ವ್ಯಸನಿಗಳ ಚಿಕಿತ್ಸಾ ಕೇಂದ್ರವಾದ ಸೆವೆರಾ ಫೌಂಡೇಶನ್ ಮಾದಕಪದಾರ್ಥ ವ್ಯಸನಿಗಳಿಗೆ ಹೊಸ ಜೀವನವನ್ನು ನೀಡುತ್ತಿದೆ. ಸ್ವಯಂಸೇವಾ ಸಂಸ್ಥೆಯೊಂದು ನಡೆಸುವ ಈ ಪ್ರತಿಷ್ಠಾನವು ಮಾದಕ ವ್ಯಸನಿಗಳಿಗೆ ಸಲಹಾ ಕೋರ್ಸ್‌ಗಳನ್ನು ಹಮ್ಮಿಕೊಂಡು ಅತೀ ಅಪಾಯಕಾರಿ ಚಟದಿಂದ ಅವರನ್ನು ಪಾರುಮಾಡುತ್ತಿದೆ.
ಹಿಂದೆ ಮಾದಕವಸ್ತು ವ್ಯಸನಿಯಾಗಿದ್ದ ಅರವಿಂದ್ ಈಗ ಸೆವೇರಾ ಫೌಂಡೇಶನ್ ಆಡಳಿತ ಮುಖ್ಯಸ್ಥ. "ಮಾದಕ ವ್ಯಸನಿಗಳು ಇನ್ನೊಬ್ಬ ವ್ಯಸನಿ ಜತೆ ಭಾವನೆ ಹಂಚಿಕೊಳ್ಳುವದರಿಂದ ಹೆಚ್ಚು ನೆಮ್ಮದಿ ಸಿಗುತ್ತದೆ.
ನಾವು ಮಾದಕವ್ಯಸನ ತ್ಯಜಿಸಿ ಯಶಸ್ವಿ, ಶಾಂತಿ ಜೀವನ ನಡೆಸುತ್ತಿರುವಾಗ ಬೇರೆಯವರು ಕೂಡ ಇದೇರೀತಿ ಆಗಬಹುದು. ಉಳಿದವರ ಅನುಭವದ ಮೂಲಕ ನಾವು ಅವರಿಗೆ ಚಿಕಿತ್ಸೆ ನೀಡುತ್ತೇವೆ" ಎಂದು ಅರವಿಂದ್ ಹೇಳಿದರು.
ಇಲ್ಲಿಗೆ ದಾಖಲಾದವರನ್ನು ಕೇಂದ್ರವು ಕೂಡಿಹಾಕದೇ ಅವರು ಕ್ರೀಡೆ, ನೃತ್ಯ, ಓದು ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರಶಾಂತ ವಾತಾವರಣ ಸೃಷ್ಟಿಸುತ್ತೇವೆ. ಕೇಂದ್ರವು ಶೇ. 74.7ರಷ್ಟು ಯಶಸ್ಸು ಹೊಂದಲು ಇದೇ ಕಾರಣವಾಗಿದೆ ಎಂದು ಅವರು ಹೇಳಿದರು.
ನನ್ನ ಜೀವನ ಈಗ ಸುಧಾರಿಸಿದೆ. ಈಗ ನನಗೆ ಕುಟುಂಬ, ಹಣ, ಸಂತೋಷ ಎಲ್ಲವೂ ಇದೆ. ಇದಕ್ಕಿಂತ ಹೆಚ್ಚಿಗೆ ನಾನು ಬಯಸುವುದಿಲ್ಲ. ಇವೆಲ್ಲಾ ಸೆವೆರಾ ಫೌಂಡೇಶನ್ ಪ್ರಯತ್ನದಿಂದ ಆಗಿದೆ ಎಂದು ಸುದಾರಣೆಯಾದ ವ್ಯಸನಿ ಅಲೋಕ್ ಹೇಳುತ್ತಾರೆ.
ಹಿಮಾಲಯ ಪರ್ವತದ ಮನೋಹರ ದೃಶ್ಯಗಳು ಮತ್ತು ಸುಂದರ ಕಣಿವೆಗಳಿಂದ ಕೂಡಿ ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾದ ಹಿಮಾಚಲ ಪ್ರದೇಶ, ರಾಷ್ಟ್ರದ ಮಾದಕವಸ್ತು ಕೇಂದ್ರವಾಗಿ ಪರಿವರ್ತನೆಯಾಗಿದೆ.
ಮಾದಕವಸ್ತು ಜಾಲದವರ ಪ್ರಚೋದನೆಯಿಂದ ಸಣ್ಣ ರೈತರು ಕೂಡ ಗಾಂಜಾ ಬೆಳೆದು ಹಣ ಗಳಿಸಿದರು. ಗಾಂಜಾ, ಮದ್ಯ ಮತ್ತಿತರ ರಾಸಾಯನಿಕ ವಸ್ತುಗಳ ಸುಲಭ ಲಭ್ಯತೆಯಿಂದ ಯುವಕರು ಮಾದಕವಸ್ತು ಚಟಕ್ಕೆ ಬಲಿಬೀಳುತ್ತಿದ್ದಾರೆಂದು ಸಾಮಾಜಿಕ ಕಾರ್ಯರ್ತರು ಹೇಳುತ್ತಾರೆ.
|