ಇಲ್ಲಿನ ನೆವಾಡಾದಲ್ಲಿ ಬುಧವಾರ ಪ್ರಮುಖ ಕ್ರೈಸ್ತ ಮುಖ್ಯ ಬಿಷಪ್ ಅಂತ್ಯಕ್ರಿಯೆಯು ಸರ್ವ ಧರ್ಮ ಸಮಭಾವಕ್ಕೆ ಸಾಕ್ಷಿಯಾಯಿತು. ಪ್ರಾಚೀನ ಹಿಂದು ಗ್ರಂಥಗಳಲ್ಲಿರುವ ಸಂಸ್ಕೃತ ಶ್ಲೋಕಗಳ ಪಠಣವು ಇದರಲ್ಲಿ ಸೇರಿತ್ತು.
ಅತ್ಯಂತ ಪವಿತ್ರ ಗಾಯತ್ರಿ ಮಂತ್ರವನ್ನು ಓಂ ಶಾಂತಿ, ಶಾಂತಿ, ಶಾಂತಿ ಎಂಬ ಮಂತ್ರದಿಂದ ಅಂತ್ಯಗೊಳಿಸಿದ ಹಿಂದು ಪುರೋಹಿತ ರಾಜನ್ ಜೇಡ್, ರಿಗ್ವೇದ, ಉಪನಿಷತ್ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಓದಿದರು.
ರೆನೊನಲ್ಲಿ ನಡೆದ ಕ್ರೈಸ್ತ ಮುಖ್ಯಸ್ಥ ಬಿಷಪ್ ಡೌಗ್ಲಾಸ್ ಯುಗೇನೆ ಸವಾಯ್ ಅಂತ್ಯಕ್ರಿಯೆಯಲ್ಲಿ ಬಿಷಪ್ ಹಿರಿಯ ಪುತ್ರ ಧರ್ಮಗ್ರಂಥ ಓದಿದರೆ ಕಿರಿಯ ಪುತ್ರ ಕ್ರಿಯಾವಿಧಿ ನೆರವೇರಿಸಿದರು. ಡೌಗ್ಲಾಸ್ ಖ್ಯಾತ ಕೃತಿಕಾರರಾಗಿದ್ದು, ಅವರು 50 ಧಾರ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು 400ಕ್ಕೂ ಹೆಚ್ಚು ಧ್ವನಿಮುದ್ರಿತ ಉಪನ್ಯಾಸ ನೀಡಿದ್ದಾರೆ.
ಖಲೀಲ್ ಗಿಬ್ರಾನ್ ಅವರ ಸ್ಫೂರ್ತಿಯುತ ಬರೆಹವನ್ನು ರೆಬೆಕಾ ವಿಲಿಯಮ್ಸ್ ಓದಿದರು. ಕುರಾನ್‌ನ ಅರೇಬಿಕ್ ಪಠಣವನ್ನು ತುನಯ್ ದರ್ಮಾಜ್ ಓದಿದರು ಮತ್ತು ಬೌದ್ಧ ಪ್ರಾರ್ಥನೆಯನ್ನು ಡಾ. ವಿಲಿಯಮ್ ಬಾರ್ಲೆಟ್ ನೆರವೇರಿಸಿದರು.
|