ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರಮಾಣಪತ್ರ:ಸೋನಿಯಾ ಮುನಿಸು
PTI
ಸುಪ್ರೀಂಕೋರ್ಟ್‌ನಲ್ಲಿ ರಾಮಸೇತು ಕುರಿತು ವಿವಾದಾತ್ಮಕ ಪ್ರಮಾಣಪತ್ರ ಸಲ್ಲಿಸಿದ ಮರುದಿನವೇ ಸೋನಿಯಾ ಗಾಂಧಿ ಮುನಿಸಿಕೊಂಡು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರಿಗೆ ಕರೆ ಮಾಡಿ ಛೀಮಾರಿ ಹಾಕಿದರೆಂದು ಗೊತ್ತಾಗಿದೆ.

ಸೋನಿ ಅವರಿಗೆ ಸೆ.13ರಂದು ಕರೆ ಬಂದಾಗ ಅವರು ಅಧಿಕೃತ ಬೇಟಿಗಾಗಿ ಜಪಾನ್‌ನಲ್ಲಿದ್ದರು. ನಿಮ್ಮ ಸಚಿವಾಲಯ ಯಾವ ರೀತಿಯ ಪ್ರಮಾಣಪತ್ರ ಸಿದ್ಧಪಡಿಸಿದೆ ಎಂದು ಸೋನಿಯಾ ಅಂಬಿಕಾರನ್ನು ಕೇಳಿದದರೆಂದು ಮೂಲಗಳು ಹೇಳಿವೆ. ಪ್ರಧಾನಮಂತ್ರಿ ಮನಮೋಹನ್ ಕೂಡ ಅವರಿಗೆ ಕರೆ ಮಾಡಿದ್ದರು.

ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಸತ್ಯವಿಲ್ಲ ಎಂದು ರಾಮ ಸೇತು ಬಗ್ಗೆ ಪ್ರಮಾಣಪತ್ರದಲ್ಲಿ ಸರ್ಕಾರ ವಾದ ಮಂಡಿಸಿತ್ತು. ಸಂಸ್ಕೃತಿ ಸಚಿವಾಲಯದ ಅಡಿ ಬರುವ ಪುರಾತತ್ವ ಇಲಾಖೆ ಈ ಪ್ರಮಾಣಪತ್ರ ಸಿದ್ಧಪಡಿಸಿತ್ತು.
ಮತ್ತಷ್ಟು
ಒತ್ತಡಗಳಿಗೆ ಮಣಿಯದಂತೆ ಸಿಪಿಎಂ ಕರೆ
ಬಿಷಪ್ ಅಂತ್ಯಕ್ರಿಯೆಯಲ್ಲಿ ಸಂಸ್ಕೃತ ಶ್ಲೋಕ
ಸೆವೆರಾ : ವ್ಯಸನಿಗಳಿಗೆ ಮರುಚೇತನ
ಮೆಮರಿ ಚಾಂಪಿಯನ್ ನಿಶ್ಚಾಲ್
ರಾಮ ಸುಳ್ಳುಗಾರನಾಗಿದ್ದ: ಕರುಣಾನಿಧಿ
ಮಹಿಳೆಯಿಂದ ಚಿನ್ನಾಭರಣ ದರೋಡೆ