ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಬರ್‌ವಾಲ್ ವಿರುದ್ಧ ಲೇಖನಕ್ಕೆ ಸಜೆ
ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರವಾಲ್ ವಿರುದ್ಧ ಲೇಖನಗಳನ್ನು ಪ್ರಕಟಿಸಿದ್ದಾಗಿ ನ್ಯಾಯಾಲಯ ನಿಂದನೆ ಆರೋಪ ಎದುರಿಸಿದ ಮಿಡ್-ಡೆ ಪತ್ರಿಕೆಯ ನಾಲ್ವರು ಹಿರಿಯ ಪತ್ರಕರ್ತರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ನಾಲ್ಕು ತಿಂಗಳ ಸಜೆ ವಿಧಿಸಿದೆ.

ದೆಹಲಿಯಲ್ಲಿ ನಡೆದ ಬೀಗಮುದ್ರೆ ಕಾರ್ಯಾಚರಣೆಯಲ್ಲಿ ಸಬರವಾಲ್ ಅವ್ಯವಹಾರ ಎಸಗಿದ್ದಾರೆಂದು ಅವರ ವಿರುದ್ಧ ಲೇಖನಗಳಲ್ಲಿ ಬರೆಯಲಾಗಿತ್ತು.ಲೇಖನಗಳನ್ನು ಪ್ರಕಟಿಸಿದ ಸಂಪಾದಕ, ಪ್ರಕಾಶಕ, ಸ್ಥಾನಿಕ ಸಂಪಾದಕ ಮತ್ತು ವ್ಯಂಗ್ಯಚಿತ್ರಕಾರರನನ್ನು ಕೋರ್ಟ್ ತಪ್ಪಿತಸ್ಥರನ್ನಾಗಿಸಿದೆ.

ಎಲ್ಲ ನಾಲ್ವರು ಪತ್ರಕರ್ತರಿಗೂ ದೆಹಲಿ ಹೈಕೋರ್ಟ್ 10,000 ರೂ. ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದೆ.ನ್ಯಾಯಾಲಯ ನಿಂದನೆಗೆ ತಪ್ಪಿಸತ್ಥರನ್ನಾಗಿಸಲು ಅವರ ವಿರುದ್ಧ ಸಾಕಷ್ಟು ಸಾಕ್ಷ್ಯವಿದೆ.

ಸುಪ್ರೀಂಕೋರ್ಟ್ ತೀರ್ಪುಗಳು ವಿಧಿಸಿರುವ ಲಕ್ಷ್ಮಣ ರೇಖೆಯನ್ನು ಈ ಲೇಖನಗಳು ದಾಟಿಹೋಗಿವೆ ಎಂದು ಆರ್. ಎಸ್. ಸೋಧಿ ಮತ್ತು ಬಿ.ಎನ್. ಚತುರ್ವೇದಿ ಅವರಿದ್ದ ಪೀಠ ತಿಳಿಸಿದೆ.ಸಬರ್‌ವಾಲ್ ಮಕ್ಕಳು ಮಾಲ್ ಡೆವಲಪರ್‌ಗಳ ಜತೆ ಸಂಬಂಧ ಹೊಂದಿದ್ದು, ಬೀಗಮುದ್ರೆ ಕಾರ್ಯಾಚರಣೆಯಿಂದ ಲಾಭ ಗಳಿಸಿದ್ದಾರೆ ಎಂದು ಆರೋಪಿಸಿದ ವರದಿಗೆ ಸಂಬಂಧಪಟ್ಟಂತೆ ಪತ್ರಿಕೆ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿಯನ್ನು ದಾಖಲಿಸಲಾಗಿತ್ತು.

ಹೈಕೋರ್ಟ್ ಮೇ 18ರಂದು ಸ್ವಯಂಪ್ರೇರಿತವಾಗಿ ಸಂಪಾದಕರು, ವರದಿಗಾರ ಮತ್ತು ಪ್ರಕಾಶಕರಿಗೆ ನೋಟೀಸ್ ನೀಡಿತ್ತು. ಸಬರ್‌ವಾಲ್ ರೇಖಾಚಿತ್ರ ಬಿಡಿಸಿದ ವ್ಯಂಗ್ಯಚಿತ್ರಕಾರನಿಗೆ ಕೂಡ ಬಳಿಕ ಅದು ನೋಟೀಸ್ ನೀಡಿತು.
ಮತ್ತಷ್ಟು
ಪ್ರಮಾಣಪತ್ರ:ಸೋನಿಯಾ ಮುನಿಸು
ಒತ್ತಡಗಳಿಗೆ ಮಣಿಯದಂತೆ ಸಿಪಿಎಂ ಕರೆ
ಬಿಷಪ್ ಅಂತ್ಯಕ್ರಿಯೆಯಲ್ಲಿ ಸಂಸ್ಕೃತ ಶ್ಲೋಕ
ಸೆವೆರಾ : ವ್ಯಸನಿಗಳಿಗೆ ಮರುಚೇತನ
ಮೆಮರಿ ಚಾಂಪಿಯನ್ ನಿಶ್ಚಾಲ್
ರಾಮ ಸುಳ್ಳುಗಾರನಾಗಿದ್ದ: ಕರುಣಾನಿಧಿ