ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಾಯುಭಾರ ಕುಸಿತದಿಂದ ಭಾರೀ ಮಳೆ
ದಕ್ಷಿಣ ಒರಿಸ್ಸಾ ಮತ್ತು ಆಂಧ್ರಪ್ರದೇಶದ ಉತ್ತರಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಭಾರೀ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ ಆಂಧ್ರಪ್ರದೇಶ ಸರ್ಕಾರ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದೆ
.
ಅಧಿಕಾರಿಗಳು ಯಾವುದೇ ಅನಾಹುತ ಎದುರಿಸುವುದಕ್ಕೆ ಸಜ್ಜಾಗಿರಲು ಕರಾವಳಿ ಜಿಲ್ಲೆಗಳಲ್ಲಿ ನಿಯಂತ್ರಣ ಕಚೇರಿಯನ್ನು ತೆರೆದಿದೆ.33,404 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದು ಹಾನಿ ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.

ಇದೇ ಅವಧಿಯಲ್ಲಿ ದಕ್ಷಿಣ ಆಂಧ್ರಪ್ರದೇಶ ಕರಾವಳಿಯಲ್ಲಿ ಒಂದೆರಡು ಕಡೆ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ.ವಾಯವ್ಯ ಮಾರ್ಗದಿಂದ ಗಂಟೆಗೆ 45ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದಲ್ಲಿ ಕೂಡ ಉಬ್ಬರವಿರುತ್ತದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮತ್ತಷ್ಟು
ಭೂಮಿ ರಕ್ಷಣೆಯ ಮಹತ್ವ ಅರಿತಿದ್ದ ಗಾಂಧಿ
ಸಬರ್‌ವಾಲ್ ವಿರುದ್ಧ ಲೇಖನಕ್ಕೆ ಸಜೆ
ಪ್ರಮಾಣಪತ್ರ:ಸೋನಿಯಾ ಮುನಿಸು
ಒತ್ತಡಗಳಿಗೆ ಮಣಿಯದಂತೆ ಸಿಪಿಎಂ ಕರೆ
ಬಿಷಪ್ ಅಂತ್ಯಕ್ರಿಯೆಯಲ್ಲಿ ಸಂಸ್ಕೃತ ಶ್ಲೋಕ
ಸೆವೆರಾ : ವ್ಯಸನಿಗಳಿಗೆ ಮರುಚೇತನ