ಆರೋಪಿಗಳ ಗುಂಪಿನ ಮೇಲೆ ಅಜ್ಞಾತ ವ್ಯಕ್ತಿಗಳು ಗುರುವಾರ ಕೋರ್ಟ್ ಆವರಣದೊಳಗೆ ಗುಂಡು ಹಾರಿಸಿ, ಬಾಂಬ್ ಎಸೆದಿದ್ದರಿಂದ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟು ಇನ್ನೂ ನಾಲ್ವರು ಗಾಯಗೊಂಡ ಘಟನೆ ಪಾಟ್ನಾದಲ್ಲಿ ಸಂಭವಿಸಿದೆ.
ವಿಚಾರಣಾಧೀನ ಕೈದಿ ಹರ್ಬನ್‌ಶ್ರಾಮ್ ಸ್ಥಳದಲ್ಲೇ ಸತ್ತ. ಇನ್ನೊಬ್ಬ ಆರೋಪಿ ಮತ್ತು ವಕೀಲರೊಬ್ಬರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಕರೆತರುತ್ತಿದ್ದಾಗ, ನಾಲ್ವರು ಒಂದು ಬದಿಯಿಂದ ಆಗಮಿಸಿ ಆರೋಪಿ ಮೇಲೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿ ಸುರೇಂದ್ರ ಕುಮಾರ್ ತಿಳಿಸಿದರು.
ಇದಾದ ಬಳಿಕ ಪುನಃ ಹಿಂತಿರುಗಿ ಬಂದ ನಾಲ್ವರು ಇನ್ನೊಂದು ಬಾಂಬ್ ಎಸೆದಾಗ ಇಬ್ಬರು ವಕೀಲರು ಗಾಯಗೊಂಡರು. ಹಳೆಯ ದ್ವೇಷ ಈ ದಾಳಿಗೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
|